ಮೊದಲಿಗೆ ನಾಲ್ಕು ಆಲೂಗೆಡ್ಡೆಯನ್ನು ಸಿಪ್ಪೆ ತೆಗೆದು ಕಡ್ಡಿಯಂತೆ ಉದ್ದಕ್ಕೆ ಕತ್ತರಿಸಿಟ್ಟುಕೊಳ್ಳಿ.
ನಂತರ ಸ್ಟೌ ಆನ್ ಮಾಡಿ ಕಡಾಯಿ ಇಟ್ಟು ನೀರು ಬಿಸಿ ಮಾಡಿ, ಅದಕ್ಕೆ ಉಪ್ಪು ಹಾಕಿಕೊಳ್ಳಿ. ಬಳಿಕ ಹೆಚ್ಚಿಕೊಂಡಿರುವ ಆಲೂಗೆಡ್ಡೆ ಹೋಳುಗಳನ್ನು 5 ನಿಮಿಷ ದೊಡ್ಡ ಉರಿಯಲ್ಲಿ ಬೇಯಿಸಿಕೊಳ್ಳಿ.
ಬೆಂದಿರುವ ಆಲೂಗಡ್ಡೆಯನ್ನು ನೀರಿನಿಂದ ತೆಗೆದು ಒಂದು ಮಿಕ್ಸಿಂಗ್ ಬೌಲ್ಗೆ ಹಾಕಿಕೊಳ್ಳಿ. ಇದಕ್ಕೆ ಅರ್ಧ ಚಮಚ ಅಚ್ಚಖಾರದ ಪುಡಿ, ಅರ್ಧ ಚಮಚ ಚಿಲ್ಲಿ ಫ್ಲೇಕ್ಸ್, ಒಂದು ಟೀಸ್ಪೂನ್ ಮೈದಾ ಹಿಟ್ಟು, ಒಂದು ಟೀ ಸ್ಪೂನ್ ಅಕ್ಕಿ ಹಿಟ್ಟು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈಗ ಒಂದು ಪ್ಯಾನ್ ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಆಲೂಗೆಡ್ಡೆ ಮಿಶ್ರಣವನ್ನು ಗೋಲ್ಡನ್ ಬಣ್ಣ ಬರುವವರೆಗೆ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ.
ಅಕ್ರಮವಾಗಿ ʼರೇಶನ್ ಕಾರ್ಡ್ʼ ಪಡೆದಿದ್ದೀರಾ…? ಹಾಗಾದ್ರೆ ಓದಲೇಬೇಕು ಈ ಸುದ್ದಿ
ನಂತರ ಒಂದು ಪ್ಯಾನ್ ಇಟ್ಟು ಸ್ವಲ್ಪ ಎಣ್ಣೆ ಬಿಸಿ ಮಾಡಿ. ಇದಕ್ಕೆ 2 ಒಣ ಮೆಣಸಿನಕಾಯಿ, ಸಣ್ಣದಾಗಿ ಹೆಚ್ಚಿಕೊಂಡ ಬೆಳ್ಳುಳ್ಳಿ, ಶುಂಠಿ ಅರ್ಧ ಚಮಚ ಮತ್ತು 2 ಹಸಿಮೆಣಸಿನಕಾಯಿ ಸೇರಿಸಿ ಬಾಡಿಸಿಕೊಳ್ಳಿ.
ಬಳಿಕ ಮೀಡಿಯಂ ಸೈಜ್ಗೆ ಹೆಚ್ಚಿಕೊಂಡ 2 ಈರುಳ್ಳಿಯನ್ನು ಸೇರಿಸಿ ಫ್ರೈ ಮಾಡಿಕೊಳ್ಳಿ. ನಂತರ ಉದ್ದಕ್ಕೆ ಸಣ್ಣದಾಗಿ ಹೆಚ್ಚಿಕೊಂಡ ಒಂದು ದಪ್ಪ ಮೆಣಸಿನಕಾಯಿ ಹೋಳುಗಳನ್ನು ಸೇರಿಸಿ ಫ್ರೈ ಮಾಡಿ.
ಇದಕ್ಕೆ ಒಂದು ಚಮಚ ಟೊಮ್ಯಾಟೊ ಕೆಚಪ್, ಚಿಲ್ಲಿ ಸಾಸ್, ಕಾಲು ಚಮಚ ಸೋಯಾ ಸಾಸ್, ಅರ್ಧ ಚಮಚ ಶೆಜ್ವಾನ್ ಸಾಸ್ ಸೇರಿಸಿ ಮಿಕ್ಸ್ ಮಾಡಿ.
ಸ್ವಲ್ಪ ಉಪ್ಪು , ಚೂರು ಅಚ್ಚಖಾರದ ಪುಡಿ ಸೇರಿಸಿ ಮಿಕ್ಸ್ ಮಾಡಿ. ಈಗ ಈ ಮಿಶ್ರಣಕ್ಕೆ ಫ್ರೈ ಮಾಡಿಕೊಂಡ ಆಲೂಗೆಡ್ಡೆ ಹೋಳುಗಳನ್ನು ಹಾಕಿ ಮಿಕ್ಸ್ ಮಾಡಿದ್ರೆ ಟೇಸ್ಟೀ ಟೇಸ್ಟೀ ಆಲೂ ಚಿಲ್ಲಿ ನೊರೆಭರಿತ ಕಾಫಿ ಜೊತೆಗೆ ಸಂಜೆ ಸಮಯ ಸವಿಯಲು ಸಿದ್ಧ.