ಮಕ್ಕಳಿಗೆ ಸಂಜೆ ಸಮಯದಲ್ಲಿ ಏನಾದರೂ ರುಚಿಕರವಾದ ಸ್ನ್ಯಾಕ್ಸ್ ಮಾಡಿಕೊಟ್ಟರೆ ಖುಷಿಪಡುತ್ತಾರೆ. ಇಲ್ಲಿ ಬೇಗನೆ ಆಗಿಬಿಡುವಂತಹ ಫ್ರೆಂಚ್ ಟೋಸ್ಟ್ ರೆಸಿಪಿ ಇದೆ ಒಮ್ಮೆ ಮಾಡಿ ನೋಡಿ.
ಬೇಕಾಗುವ ಸಾಮಾಗ್ರಿಗಳು:
4-ಮೊಟ್ಟೆ, 10 ಟೇಬಲ್ ಸ್ಪೂನ್ – ಹಾಲು, 2 ಟೀ ಸ್ಪೂನ್ – ಚಕ್ಕೆ ಪುಡಿ, 8 ಪೀಸ್ – ಬ್ರೆಡ್, ಬೆಣ್ಣೆ – ಸ್ವಲ್ಪ, ಮಾಪ್ಲೆ ಸಿರಪ್ – ಸ್ವಲ್ಪ.
ಮಾಡುವ ವಿಧಾನ:
ಒಂದು ಬೌಲ್ ಗೆ ಹಾಲು ಹಾಕಿ ನಂತರ ಇದಕ್ಕೆ ಮೊಟ್ಟೆ ಒಡೆದು ಹಾಕಿ. ಹಾಗೇ ಚಕ್ಕೆ ಪುಡಿ ಕೂಡ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದರಲ್ಲಿ ಒಂದೊಂದೇ ಪೀಸ್ ಬ್ರೆಡ್ ಅನ್ನು ಮುಳುಗಿಸಿ ಸ್ವಲ್ಪ ಹೊತ್ತು ಇಡಿ.
ಗ್ಯಾಸ್ ಮೇಲೆ ಒಂದು ತವಾ ಇಟ್ಟು ಅದಕ್ಕೆ ಬೆಣ್ಣೆ ಹಾಕಿ ಮೊಟ್ಟೆಯ ಮಿಶ್ರಣದಲ್ಲಿ ಮುಳುಗಿಸಿದ ಬ್ರೆಡ್ ಅನ್ನು ತವಾದ ಮೇಲೆ ಹಾಕಿ ಎರಡೂ ಕಡೆ ಚೆನ್ನಾಗಿ ರೋಸ್ಟ್ ಮಾಡಿಕೊಂಡು ಒಂದು ಪ್ಲೇಟ್ ಗೆ ತೆಗೆದುಕೊಳ್ಳಿ. ಇದರ ಮಲೆ ಮಾಪ್ಲೆ ಸಿರಪ್ ಅಥವಾ ಸ್ಟ್ರಾಬೆರಿ ಸಾಸ್ ಕೂಡ ಹಾಕಿ ಸರ್ವ್ ಮಾಡಬಹುದು.