ಸಂಜೆಯಾದಂತೆ ಹೆಚ್ಚುವ ತಲೆನೋವು ವಿಪರೀತ ಸುಸ್ತಿನ ಲಕ್ಷಣ. ಯಾವುದೇ ವಿಷಯವನ್ನು ಅತಿಯಾಗಿ ಹಚ್ಚಿಕೊಂಡು ತಲೆಬಿಸಿ ಮಾಡಿಕೊಂಡರೂ ತಲೆನೋವು ಕಾಣಿಸಿಕೊಳ್ಳುತ್ತದೆ. ಇದರ ಪರಿಹಾರಕ್ಕೆ ಹೀಗೆ ಮಾಡಿ.
ತಲೆಗೆ ಹರಳೆಣ್ಣೆ ಅಥವಾ ಎಳ್ಳೆಣ್ಣೆ ಹಾಕಿ ಮಸಾಜ್ ಮಾಡಿ. ಇದರಿಂದ ತಲೆ ರಿಲ್ಯಾಕ್ಸ್ ಆಗುತ್ತದೆ. ಮನಸ್ಸಿಗೆ ಮುದ ನೀಡುವ ಹಾಡುಗಳನ್ನು ಕೇಳಿ. ಕಿರಿಕಿರಿ ಮಾಡುವ ವಸ್ತು ಹಾಗೂ ವ್ಯಕ್ತಿಗಳಿಂದ ದೂರವಿರಿ.
ಸಣ್ಣ ತಲೆನೋವಿಗೆ ಮಾತ್ರೆಯ ಮೊರೆ ಹೋಗದಿರಿ. ಬಿಸಿನೀರಿಗೆ ಚಿಟಿಕೆ ಉಪ್ಪು ಬೆರೆಸಿ ಗಳಗಳನೆ ಕುಡಿಯಿರಿ. ಐಸ್ ನಿಂದ ಹಣೆಯ ಮುಂಭಾಗಕ್ಕೆ ಮಸಾಜ್ ಮಾಡಿ. ವಿಶ್ರಾಂತಿ ತೆಗೆದುಕೊಳ್ಳಿ. ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಆರಾಮಾಗಿ ನಿದ್ದೆ ಮಾಡಿ. ಮರುದಿನ ಎದ್ದಾಗ ತಲೆನೋವು ಮಾಯವಾಗಿರುತ್ತದೆ.
ಶುಂಠಿ ಹಾಗೂ ನಿಂಬೆರಸ ಬೆರೆಸಿ ಕುಡಿಯುವುದರಿಂದಲೂ ತಲೆನೋವು ದೂರವಾಗುತ್ತದೆ. ಮಸಾಲೆ ಚಹಾ ತಯಾರಿಸಿ ಕುಡಿದರೆ ಶೀತಕ್ಕೆ ಸಂಬಂಧಿಸಿದಂತೆ ತಲೆನೋವು ಕಾಡುತ್ತಿದ್ದರೆ ಅದೂ ದೂರವಾಗುತ್ತದೆ. ಪುದಿನಾ ರಸವನ್ನು ತಲೆಗೆ ಸವರಿಕೊಂಡರೂ ತಲೆನೋವಿನ ತೀವ್ರತೆ ಕಡಿಮೆಯಾಗುತ್ತದೆ.