ಬೆಂಗಳೂರು : ಆರ್.ಎಸ್.ಎಸ್. ನಲ್ಲಿ ದೇಶಭಕ್ತಿ, ಸಂಸ್ಕೃತಿ ಹೇಳಿಕೊಡುತ್ತಾರೆ. ಆರ್.ಎಸ್.ಎಸ್. ನ್ನು ತಾಲಿಬಾನಿ ಸಂಸ್ಕೃತಿಗೆ ಹೋಲಿಸುವ ವಿಪಕ್ಷ ನಾಯಕ ಸಿದ್ದರಾಮಯ್ಯ ಆರ್.ಎಸ್. ಎಸ್. ಶಾಖೆಗೆ ಬಂದು ನೋಡಲಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಆರ್.ಎಸ್.ಎಸ್. ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ಸಂಘ ಪರಿವಾರದ ನಾಯಕರಿಗೆ ಕುರ್ಚಿ ವ್ಯಾಮಹೋವಿಲ್ಲ, ಆರ್.ಎಸ್.ಎಸ್. ಟೀಕಿಸುವ ನೈತಿಕ ಹಕ್ಕು ಯಾರಿಗೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಮತ್ತೋರ್ವ ಶಾಸಕರ ನಿವಾಸದ ಮೇಲೆ ಕಲ್ಲು ತೂರಾಟ; ಮನೆ ಮುಂದೆ ನಿಂತಿದ್ದ 8 ಕಾರುಗಳ ಗಾಜು ಪುಡಿಗೈದ ಕಿಡಿಗೇಡಿಗಳು
ದೇಶಕ್ಕಾಗಿ ತ್ಯಾಗ ಮಾಡುವ ಸಂಸ್ಥೆ ಆರ್.ಎಸ್.ಎಸ್. ಕುರ್ಚಿ ವ್ಯಾಮೋಹ ಇರುವುದು ಕಾಂಗ್ರೆಸ್, ಜೆಡಿಎಸ್ ನವರಿಗೆ. ಹೊರತು ಆರ್.ಎಸ್.ಎಸ್. ನವರಿಗಲ್ಲ. ಆರ್.ಎಸ್.ಎಸ್. ದೂರಿದರೆ ಜನ ಸಹಿಸಲ್ಲ. ಈಗಾಗಲೇ ಕಾಂಗ್ರೆಸ್ ತನ್ನ ನೆಲೆ ಕಳೆದುಕೊಂಡಿದೆ. ಉಪ ಚುನಾವಣೆಗಳಲ್ಲಿ ಸೋತ ಬಳಿಕ ನಿರ್ನಾಮವಾಗಲಿದೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಬಿ ಎಸ್ ವೈ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಐಟಿ ದಾಳಿಗೂ ಯಡಿಯೂರಪ್ಪನವರಿಗೂ ಯಾವುದೇ ಸಂಬಂಧವಿಲ್ಲ, ಐಟಿಯವರು ಸ್ವತಂತ್ರವಾಗಿ ದಾಳಿ ನಡೆಸಿದ್ದಾರೆ. ಯಡಿಯೂರಪ್ಪನವರ ಶಕ್ತಿ ಕುಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ, ಅವರನ್ನು ಯಾರೂ ಕಟ್ಟಿಹಾಕಲು ಆಗಲ್ಲ ಎಂದು ವಾಗ್ದಾಳಿ ನಡೆಸಿದರು.