ಆಧುನಿಕ ಜೀವನ ಶೈಲಿಯಲ್ಲಿ ಮಾನಸಿಕ ಒತ್ತಡ ಮಿದುಳಿನ ಮೇಲೆ ಪರಿಣಾಮ ಬೀರುತ್ತಿದೆ. ಇದ್ರಿಂದ ಏಕಾಂಗಿತನ ಕಾಡಲು ಶುರುವಾಗಿದೆ. ಮಾನಸಿಕ ರೋಗಗಳು ಕಾಣಿಸಿಕೊಳ್ತಿವೆ. ಮನಸ್ಸು ಒತ್ತಡದಿಂದ ಹೊರ ಬರಲು ನಿಶ್ಚಿತ ಸಮಯದ ವಿಶ್ರಾಂತಿ ಹಾಗೂ ಮನರಂಜನೆಯ ಅಗತ್ಯವಿರುತ್ತದೆ.
ಹಿರಿಯರ ಚಿಂತೆಯಿರಲಿ ಇಲ್ಲ ಯುವಕರ ಒತ್ತಡವಿರಲಿ ಎಲ್ಲದಕ್ಕೂ ಸುಲಭ ಪರಿಹಾರ ಸಂಗೀತದಿಂದ ಸಾಧ್ಯ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ಶಾಂತಿ ನೀಡುವ ಕೆಲಸವನ್ನು ಸಂಗೀತ ಮಾಡುತ್ತದೆ. ರಾಗ ಥೆರಪಿ ಸೇರಿದಂತೆ ನಾದ ಯೋಗ ಪುರಾತನ ಕಾಲದಿಂದಲೂ ನಮ್ಮ ದೇಶದಲ್ಲಿ ಚಾಲ್ತಿಯಲ್ಲಿದೆ. ಮನಸ್ಸಿಗೆ ಉತ್ಸಾಹ ನೀಡಿ, ಕ್ಯಾನ್ಸರ್ ನಂತಹ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಇದು ನೀಡುತ್ತದೆ.
ಸಂಗೀತ ಮಿದುಳಿನ ಮೇಲೆ ಪ್ರಭಾವ ಬೀರುತ್ತದೆ. ಅಳುತ್ತಿರುವ ಮಕ್ಕಳು ಕೂಡ ಸಂಗೀತ ಕೇಳಿ ಮಲಗುತ್ತಾರೆ. ಸಂಗೀತ ಸಕಾರಾತ್ಮಕತೆಯನ್ನು ನಿರ್ಮಾಣ ಮಾಡಿ ಮಾನಸಿಕ ಹಾಗೂ ದೈಹಿಕ ಸಮಸ್ಯೆಯನ್ನು ದೂರ ಮಾಡುವ ಶಕ್ತಿ ಹೊಂದಿದೆ. ಸಂಗೀತ ನಕಾರಾತ್ಮಕ ವಿಚಾರವನ್ನು ಅಳಿಸಿ ಹಾಕಿ ಸಕಾರಾತ್ಮಕ ಚಿಂತನ ಶಕ್ತಿ ಹೆಚ್ಚಾಗುವಂತೆ ಮಾಡುತ್ತದೆ. ಸಂಗೀತದಿಂದ ಕೋಪ, ಅಸೂಯೆ, ದುಃಖ ದೂರವಾಗುತ್ತದೆ.