alex Certify ಸಂಗಾತಿಯೊಂದಿಗೆ ಚಳಿಗಾಲದಲ್ಲಿ ಪ್ರವಾಸ ಹೋಗಲು ಅತ್ಯುತ್ತಮ ತಾಣ ಕಾಶ್ಮೀರ ಕಣಿವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಗಾತಿಯೊಂದಿಗೆ ಚಳಿಗಾಲದಲ್ಲಿ ಪ್ರವಾಸ ಹೋಗಲು ಅತ್ಯುತ್ತಮ ತಾಣ ಕಾಶ್ಮೀರ ಕಣಿವೆ

ಡಿಸೆಂಬರ್‌ ತಿಂಗಳಿನಲ್ಲಿ ಪ್ರವಾಸ ಹೋಗುವುದು ಅತ್ಯಂತ ಆಹ್ಲಾದಕರವೆನಿಸುತ್ತದೆ. ಅದರಲ್ಲೂ ಸಂಗಾತಿಯ ಜೊತೆಗೆ ರಮಣೀಯ ತಾಣಗಳಲ್ಲಿನ ಸುತ್ತಾಟ ಮನಕ್ಕೆ ಮುದ ನೀಡುತ್ತದೆ. ಈ ಚಳಿಗಾಲದಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಭೂಲೋಕದ ಸ್ವರ್ಗ ಕಾಶ್ಮೀರ ಕಣಿವೆಗೆ ಭೇಟಿ ನೀಡಬಹುದು.

ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತ ಪ್ರಾರಂಭವಾಗಿದೆ. ಹಿಮಪಾತವನ್ನು ನೋಡುವುದು ಅದೆಷ್ಟೋ ಜನರ ಕನಸು. ಈ ಸಮಯದಲ್ಲಿ ಕಾಶ್ಮೀರ ಪ್ರವಾಸ ಮಾಡಿದ್ರೆ ಹಿಮಪಾತದ ಆನಂದವನ್ನು ಸವಿಯಬಹುದು. ಕಣಿವೆಗಳ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು.

ಝೀಲಂ ನದಿಯ ದಡದಲ್ಲಿರುವ ಶ್ರೀನಗರವು ಜಮ್ಮು ಮತ್ತು ಕಾಶ್ಮೀರ ರಾಜ್ಯದ ರಾಜಧಾನಿ. ಇದನ್ನು ‘ಭೂಮಿಯ ಮೇಲಿನ ಸ್ವರ್ಗ’ ಎಂದೂ ಕರೆಯುತ್ತಾರೆ. ಚಳಿಗಾಲದಲ್ಲಿ, ಭಾರತ ಮತ್ತು ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ರಜಾದಿನಗಳನ್ನು ಕಳೆಯಲು ಶ್ರೀನಗರಕ್ಕೆ ಬರುತ್ತಾರೆ. ಸೋನಾಮಾರ್ಗ್ ಕಾಶ್ಮೀರದ ಪ್ರಸಿದ್ಧ ಗಿರಿಧಾಮ. ಇದು ಜಮ್ಮು ಮತ್ತು ಕಾಶ್ಮೀರದ ಗಂಡ್ವಾಲ್ ಜಿಲ್ಲೆಯಲ್ಲಿದೆ. ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡ್ತಾರೆ. ಚಾರಣವನ್ನು ಇಷ್ಟಪಡುವ ಜನರಿಗೆ ಈ ಸ್ಥಳವು ಹೇಳಿಮಾಡಿಸಿದಂತಿದೆ. ಅನೇಕ ಬಾಲಿವುಡ್‌ ಸಿನೆಮಾಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ.

ಪಹಲ್ಗಾಮ್ ತನ್ನ ಕೇಸರಿಗೆ ಹೆಸರುವಾಸಿ. ಇಲ್ಲಿ ಸುಂದರ ಹಸಿರು ಹುಲ್ಲುಗಾವಲುಗಳಿವೆ. ಎತ್ತರದ ಪರ್ವತಗಳಿಂದ ಹಿಮಾಲಯದ ವಿಹಂಗಮ ನೋಟಗಳನ್ನು ನೋಡಬಹುದು. ಬೇತಾಬ್ ಕಣಿವೆ, ಅರು ಕಣಿವೆ ಮತ್ತು ಶೇಶ್ ನಾಗ್‌ಗೆ ಭೇಟಿ ನೀಡಬಹುದು. ಅಮರನಾಥ ಯಾತ್ರೆ ಕೂಡ ಪಹಲ್ಗಾಮ್‌ನಿಂದಲೇ ಪ್ರಾರಂಭವಾಗುತ್ತದೆ.

ಗುಲ್ಮಾರ್ಗ್ ಬಾಲಿವುಡ್ ಚಲನಚಿತ್ರಗಳ ಚಿತ್ರೀಕರಣಕ್ಕೆ ನೆಚ್ಚಿನ ಸ್ಥಳವಾಗಿದೆ. ಇಲ್ಲಿ ನೀವು ಟ್ರೆಕ್ಕಿಂಗ್, ಮೌಂಟೇನ್ ಬ್ಯಾಕಿಂಗ್ ಮತ್ತು ಸ್ಕೀಯಿಂಗ್ ಅನ್ನು ಆನಂದಿಸಬಹುದು. ಚಳಿಗಾಲದಲ್ಲಿ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇದಲ್ಲದೆ, ಚಳಿಗಾಲದಲ್ಲಿ, ಈ ಸ್ಥಳವು ದಂಪತಿಗಳಿಗೆ ಹೇಳಿ ಮಾಡಿಸಿದಂತಿದೆ.

ಅನಂತನಾಗ್‌ನಲ್ಲಿರುವ ಕಿಶ್ತ್ವಾರ್ ರಾಷ್ಟ್ರೀಯ ಉದ್ಯಾನವನಕ್ಕೆ ನೀವು ಭೇಟಿ ನೀಡಬಹುದು. 7-8ನೇ ಶತಮಾನದಲ್ಲಿ ನಿರ್ಮಿಸಲಾದ ಸೂರ್ಯ ದೇವಾಲಯ ಇಲ್ಲಿದೆ. ಇದಲ್ಲದೆ. ಶಾಲಿಗ್ರಾಮ್ ದೇವಾಲಯ, ನೀಲಾ ನಾಗ್ ದೇವಾಲಯ ಮತ್ತು ಗೋಸ್ವಾಮಿ ಕುಂಡ್ ಆಶ್ರಮಕ್ಕೆ ಸಹ ಭೇಟಿ ನೀಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...