
ಹೊಗಳಿಕೆ ಯಾರಿಗೆ ಇಷ್ಟವಾಗೋದಿಲ್ಲ ಹೇಳಿ. ಹೆಣ್ಣು ಮಕ್ಕಳನ್ನು ಹೊಗಳಿದ್ರೆ ಅವರು ಜಗತ್ತು ಮರೀತಾರೆ ಎಂಬ ಮಾತಿದೆ. ಕೇವಲ ಹೆಣ್ಣೊಂದೇ ಅಲ್ಲ, ಪುರುಷ ಕೂಡ ಹೊಗಳಿದ್ರೆ ಉಬ್ಬಿ ಹೋಗ್ತಾನೆ. ಮಹಿಳೆಯ ಸೌಂದರ್ಯದ ಬಗ್ಗೆ ಗುಣಗಾನ ಮಾಡ್ತೇವೆ. ಪುರುಷರಿಗೆ ಯಾವುದರ ಬಗ್ಗೆ ಹೊಗಳಿದ್ರೆ ಇಷ್ಟವಾಗುತ್ತೆ ಗೊತ್ತಾ..?
ನಿನ್ನ ಜೊತೆ ಇರುವಾಗ ಸಿಗುವಷ್ಟು ಸಂತೋಷ, ಮತ್ಯಾರ ಜೊತೆ ಇರುವಾಗಲೂ ನನಗೆ ಸಿಗೋದಿಲ್ಲ ಅಂತಾ ಸಂಗಾತಿ ಹೇಳಿದ್ರೆ ಆತನಿಗೆ ಖುಷಿಯಾಗುತ್ತೆ. ಸಂಗಾತಿ, ಸಲಹೆ ಕೇಳಿದ್ರೆ ಪುರುಷನಿಗೆ ಸಂತೋಷವಾಗುತ್ತದೆ. ನಿನ್ನಷ್ಟು ಒಳ್ಳೆಯ ಸಲಹೆ ನೀಡುವವರು ಯಾರೂ ಇಲ್ಲ ಎಂದು ಬಿಟ್ಟರೆ ಮುಗೀತು. ಆತನನ್ನು ಹಿಡಿಯೋದು ಕಷ್ಟ.
ಪುರುಷನನ್ನು ಮೆಚ್ಚಿಸಬೇಕೆಂದರೆ ಆತನ ವ್ಯಕ್ತಿತ್ವದ ಬಗ್ಗೆ ಹೊಗಳಲು ಮರೆಯದಿರಿ. ಮಹಿಳೆಯರು ಹಾಗೂ ಪುರುಷರು ಕೂಡ ಅವರ ಸೌಂದರ್ಯದ ಬಗ್ಗೆ ಹೊಗಳಿದ್ರೆ ಖುಷಿಯಾಗ್ತಾರೆ. ಕೆಲವೇ ಕೆಲವು ಪುರುಷರು ಅಡುಗೆ ಮಾಡುವುದನ್ನು ಇಷ್ಟ ಪಡ್ತಾರೆ. ಅಂತ ಪುರುಷರು ಮಾಡಿದ ಅಡುಗೆಯ ರುಚಿ ನೋಡಿ, ಮಹಿಳೆಯರು ಹೊಗಳಿದ್ರೆ ಪುರುಷರು ಖುಷಿಯಾಗ್ತಾರೆ.