ಪ್ರೇಮಿಗಳು ಅವರವರ ರೀತಿಯಲ್ಲಿ ಪ್ರೀತಿಯನ್ನು ವ್ಯಕ್ತಪಡಿಸ್ತಾರೆ. ಕೆಲವರು ಲಾಂಗ್ ಡ್ರೈವ್ ಗೆ ಹೋದ್ರೆ, ಮತ್ತೆ ಕೆಲವರು ಡಿನ್ನರ್ ಗೆ ಹೋಗ್ತಾರೆ. ಇನ್ನು ಕೆಲವರು ಉಡುಗೊರೆ ನೀಡಿ ತಮ್ಮ ಪ್ರೀತಿ ವ್ಯಕ್ತಪಡಿಸ್ತಾರೆ. ಮುತ್ತು ಕೂಡ ಪ್ರೀತಿ ವ್ಯಕ್ತಪಡಿಸುವ ಒಂದು ರೀತಿ. ಪರಸ್ಪರ ಮುತ್ತು ಕೊಟ್ಟುಕೊಳ್ಳುವುದರಿಂದ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ.
ಪ್ರೀತಿಯ ಸಂಕೇತವಾದ ಕಿಸ್ ಕೆಲವೊಮ್ಮೆ ಸಂಗಾತಿಗಳಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಇದರಿಂದ ಮಧುರವಾದ ಕ್ಷಣ ಹಾಳಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಕಿಸ್ ಮಾಡುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿಡಬೇಕಾಗುತ್ತದೆ.
ಮೌತ್ ಪ್ರೆಶ್ ಬಳಸಿ : ನಿಮ್ಮ ಸಂಗಾತಿಗೆ ಕಿಸ್ ಕೊಡಲು ಹೋಗುವ ಮೊದಲು ನಿಮ್ಮ ಬಾಯಿಂದ ಕೆಟ್ಟ ವಾಸನೆ ಬರ್ತಾ ಇದೆಯೇ ಎಂಬುದನ್ನು ಗಮನಿಸಿ. ಒಂದು ವೇಳೆ ಬರ್ತಾ ಇದ್ದರೆ, ಅದು ನಿಮ್ಮ ಸಂಗಾತಿ ಮೂಡ್ ಹಾಳು ಮಾಡಬಹುದು. ಹಾಗಾಗಿ ಕಿಸ್ ಕೊಡುವ ಮುನ್ನ ಮೌತ್ ವಾಶ್ ಮಾಡಿಕೊಂಡು ಹೋಗಿ.
ತುಂಬಾ ಹತ್ತಿರ : ಕಿಸ್ ಕೊಡುವಾಗ ಅನೇಕರು ತುಂಬಾ ಹತ್ತಿರ ಬರ್ತಾರೆ. ಆದ್ರೆ ನಿಮ್ಮ ಸಂಗಾತಿಗೆ ಇಷ್ಟು ಹತ್ತಿರದಿಂದ ಕಿಸ್ ಕೊಡುವುದು ಇಷ್ಟವಾದಲ್ಲಿ ಮಾತ್ರ ಹೀಗೆ ಮಾಡಿ. ಇಲ್ಲವಾದ್ರೆ ಇಬ್ಬರ ಮಧ್ಯೆ ಸ್ವಲ್ಪ ಅಂತರವಿರಲಿ.
ಆತುರದಲ್ಲಿ ತಪ್ಪು ಮಾಡಬೇಡಿ : ನಿಮ್ಮ ಸಂಗಾತಿಯ ಇಚ್ಛೆಗನುಸಾರ ಕಿಸ್ ಮಾಡಿ. ಯಾವುದಕ್ಕೂ ಆತುರ ಬೇಡ. ಅವರ ಅನುಮತಿಯಿಲ್ಲದೆ ಕಿಸ್ ಮಾಡಿದ್ರೆ ನಿಮ್ಮ ಸಂಬಂಧ ಹತ್ತಿರವಾಗುವ ಬದಲು ದೂರವಾಗಬಹುದು ಎಚ್ಚರ.
ಕಣ್ಣು ಮುಚ್ಚಿ ಕಿಸ್ ಮಾಡಿ : ಕಣ್ಣು ತೆರೆದುಕೊಂಡು ನೀವು ಕಿಸ್ ಮಾಡ್ತಾ ಇದ್ದರೆ ಇನ್ನು ಹಾಗೆ ಮಾಡಬೇಡಿ. ಕಣ್ಣು ಮುಚ್ಚಿ ಕಿಸ್ ಮಾಡಿ. ನೀವು ಹಾಗೆ ಮಾಡಿದ್ರೆ ನಿಮ್ಮ ಸಂಗಾತಿ ನಿಮ್ಮನ್ನು ನೆಗ್ಲೆಟ್ ಮಾಡುವ ಸಾಧ್ಯತೆ ಇದೆ.
ಸಂಗಾತಿಯನ್ನು ಇಂಪ್ರೆಸ್ ಮಾಡಿ : ಪ್ರತಿ ಸಾರಿ ಒಂದೇ ರೀತಿಯಲ್ಲಿ ನೀವು ಸಂಗಾತಿಗೆ ಕಿಸ್ ಕೊಡ್ತಾ ಇದ್ದರೆ ಅವರು ಬೋರ್ ಆಗುವ ಸಾಧ್ಯತೆ ಇದೆ. ಹಾಗಾಗಿ ಹೊಸ ಹೊಸ ರೀತಿಯಲ್ಲಿ ಕಿಸ್ ಕೊಟ್ಟು ನಿಮ್ಮ ಸಂಗಾತಿಯನ್ನು ಇಂಪ್ರೆಸ್ ಮಾಡಿ.