alex Certify ಸಂಖ್ಯೆ 2 ಕ್ಕೆ ಈ ದೇಶಗಳಲ್ಲಿದೆ ವಿಶೇಷ ಮಹತ್ವ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಖ್ಯೆ 2 ಕ್ಕೆ ಈ ದೇಶಗಳಲ್ಲಿದೆ ವಿಶೇಷ ಮಹತ್ವ….!

ಇವತ್ತು ವಿಶೇಷ ದಿನ. ಯಾಕಂದ್ರೆ ಇವತ್ತಿನ ದಿನಾಂಕ 22-2-2022 ಅತ್ಯಂತ ವಿಶೇಷವಾಗಿದೆ. 2 ಅನ್ನೋ ಅಂಕಿಗೆ ಸಾಕಷ್ಟು ದೊಡ್ಡ ಇತಿಹಾಸವೇ ಇದೆ. ಕ್ರಿಶ್ಚಿಯನ್‌ ಧರ್ಮದಲ್ಲಿ ಪ್ರೀತಿ ಮತ್ತು ಮದುವೆಗೆ ಸಂಬಂಧಪಟ್ಟಂತೆ 2 ಎಂಬ ಅಂಕಿಯನ್ನು ಸಾಮಾಜಿಕ ಜೀವನದ ಸಂಖ್ಯೆ ಅಂತಾನೇ ಪರಿಗಣಿಸಲಾಗುತ್ತದೆ.

ಹಾಗಾಗಿಯೇ ಜರ್ಮನಿಯಲ್ಲಿ ಇವತ್ತಿನ ದಿನಾಂಕ 22-2-2022ನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಇದನ್ನು ಲಿಕ್ಕರ್‌ ನಂಬರ್‌ ಅಂತಾನೇ ಅವರು ಕರೆಯುತ್ತಾರೆ. ಅದರರ್ಥ ಮದ್ಯಪಾನ ಮಾಡಿದಾಗ ಎಲ್ಲವೂ ಎರಡೆರಡಾಗಿ ಕಾಣಿಸುತ್ತೆ ಎಂದು.

ಎರಡು ಎಂಬ ಅಂಕಿಯನ್ನು ಹೊಂದಿರೋ ಇವತ್ತಿನ ದಿನಾಂಕ ಶಕ್ತಿಯ ಸಂಕೇತ ಅಂತಾನೂ ಜರ್ಮನ್ನರು ಹೇಳ್ತಾರೆ. ಹಾಗಾಗಿ ಈ ದಿನದಂದೇ ತಮ್ಮ ಪ್ರೀತಿ ಪಾತ್ರರೊಂದಿಗೆ ಹಲವರು ಮದುವೆಯಾಗ್ತಿದ್ದಾರಂತೆ. ಇದೇ ರೀತಿ ಬೇರೆ ಬೇರೆ ರಾಷ್ಟ್ರಗಳಲ್ಲಿ ಬೇರೆ ಬೇರೆ ಅಂಕಿಗಳ ಬಗ್ಗೆ ಭಿನ್ನಾಭಿಪ್ರಾಯವಿದೆ.

ಚೀನಾ, ವಿಯೆಟ್ನಾಂ ಮತ್ತು ಥೈಲ್ಯಾಂಡ್‌ ಜನತೆ 7 ಎಂಬ ಅಂಕಿ ದುರದೃಷ್ಟಕರವೆಂದು ಭಾವಿಸುತ್ತಾರೆ. ವರ್ಷದ 7ನೇ ತಿಂಗಳನ್ನು ದೆವ್ವದ ತಿಂಗಳೆಂದು ಕರೆಯುತ್ತಾರೆ. ಆದ್ರೆ ಕ್ರಿಶ್ಚಿಯನ್‌ ಹಾಗೂ ಮುಸಲ್ಮಾನ್‌ ಧರ್ಮದಲ್ಲಿ 7 ಎಂಬ ಅಂಕಿಗೆ ಸಾಕಷ್ಟು ಮಹತ್ವ ನೀಡಲಾಗುತ್ತದೆ. ಇನ್ನು ಕೆಲವು ದೇಶಗಳಲ್ಲಿ 13 ಅನ್‌ ಲಕ್ಕಿ ಎಂಬ ಭಾವನೆಯಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...