ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆ ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲೇ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ.
ಸಾಲಗಳ ಮೇಲಿನ ಬಡ್ಡಿ ದರವನ್ನು ಶೇ. 0.10 ರಷ್ಟು ಹೆಚ್ಚಳ ಮಾಡಲಾಗಿದ್ದು, ಇದರಿಂದಾಗಿ ಗೃಹ, ವಾಹನ ಹಾಗೂ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರವೂ ಏರಿಕೆಯಾಗಲಿದೆ.
ಜನವರಿ 15 ರಿಂದಲೇ ಪರಿಷ್ಕೃತ ಬಡ್ಡಿದರ ಅನ್ವಯವಾಗಲಿದ್ದು, ಇದು ಹಾಲಿ ಸಾಲ ಪಡೆದವರಿಗೂ ಹಾಗೂ ಭವಿಷ್ಯದಲ್ಲಿ ಸಾಲ ಪಡೆಯುವವರಿಗೂ ಹೊರೆಯಾಗಿ ಪರಿಣಮಿಸಲಿದೆ.