ಹಿಂದೂ ಧರ್ಮದಲ್ಲಿ ಅನೇಕ ಹಬ್ಬಗಳನ್ನು ಆಚರಿಸಲಾಗುತ್ತದೆ. ಅದ್ರಲ್ಲಿ ಸಂಕಷ್ಟ ಚತುರ್ಥಿ ವಿಶೇಷವಾದದ್ದು. ಯಾವುದೇ ಶುಭ ಕೆಲಸ ಮಾಡುವ ವೇಳೆ ಗಣೇಶನನ್ನು ನೆನೆಯಲಾಗುತ್ತದೆ. ಗಣೇಶನಿಗೆ ಮೊದಲ ಪೂಜೆ ನಡೆಯುತ್ತದೆ. ಸಂಕಷ್ಟ ಚತುರ್ಥಿಯಂದು ವಿಧಿ-ವಿಧಾನದ ಮೂಲಕ ಗಣೇಶನ ಆರಾಧನೆ ಮಾಡಿದ್ರೆ ಎಲ್ಲ ಆಸೆಗಳು ಈಡೇರುತ್ತವೆ.
ಹುಣ್ಣಿಮೆ ನಂತ್ರ ಬರುವ ಚತುರ್ಥಿಗೆ ಸಂಕಷ್ಟ ಚತುರ್ಥಿ ಎನ್ನಲಾಗುತ್ತದೆ. ಈ ದಿನ ಗಣೇಶನ ಆರಾಧನೆ ಮಾಡಿದ್ರೆ ಎಲ್ಲ ಸಮಸ್ಯೆ ಜೊತೆಗೆ ಆರೋಗ್ಯ ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ. ಈ ಬಾರಿ ನವೆಂಬರ್ 15ರಂದು ಸಂಕಷ್ಟ ಚತುರ್ಥಿ ಆಚರಿಸಲಾಗ್ತಿದೆ. ಗಣೇಶನ ಆರಾಧನೆ ಮಾಡುವ ಭಕ್ತರು ವೃತ ಮಾಡಿ, ಚತುರ್ಥಿ ಆಚರಿಸುತ್ತಾರೆ.
ಸಂಕಷ್ಟ ಚತುರ್ಥಿಯಂದು ವೃತ ಮಾಡುವವರು ಬೆಳಿಗ್ಗೆ ಸೂರ್ಯೋದಯಕ್ಕಿಂತ ಮೊದಲು ಏಳಬೇಕು. ಸ್ನಾನ ಮಾಡಿ ಸ್ವಚ್ಛ ತಿಳಿ ಕೆಂಪು ಅಥವಾ ಹಳದಿ ಬಟ್ಟೆಯನ್ನು ಧರಿಸಬೇಕು. ಗಣೇಶನ ಮೂರ್ತಿಗೆ ಕೆಂಪು ಬಟ್ಟೆಯನ್ನು ಹಾಕಬೇಕು. ಪೂರ್ವ ಅಥವಾ ಉತ್ತರ ದಿಕ್ಕಿಗೆ ಕುಳಿತು ಆರಾಧನೆ ಮಾಡಬೇಕು. ಗಣೇಶನ ಮುಂದೆ ಒಂದು ದೀಪ ಬೆಳಗಬೇಕು. ಕೆಂಪು ಗುಲಾಬಿ ಹೂವಿನಿಂದ ಅಲಂಕರಿಸಿ ನೀರು, ಧೂಪದ್ರವ್ಯ, ಬಾಳೆಹಣ್ಣು ಮತ್ತು ಮೋದಕ, ಎಳ್ಳಿನ ಲಡ್ಡು, ಬೆಲ್ಲ ಅರ್ಪಿಸಿ ಪೂಜೆ ಮಾಡಬೇಕು.