ಜೀವನದಲ್ಲಿ ಕಷ್ಟಗಳು, ಸಂಕಷ್ಟಗಳು ಎದುರಾಗುವುದು ಸರ್ವೇ ಸಾಮಾನ್ಯ. ಕೆಲವರು ಈ ಸಂಕಷ್ಟಗಳಿಂದ ಹೊರಗೆ ಬರುತ್ತಾರೆ. ಇನ್ನು ಕೆಲವರು ಅದನ್ನು ನಿವಾರಿಸಿಕೊಳ್ಳಲಾಗದೆ ಅದರಲ್ಲಿಯೇ ಬಿದ್ದು ಒದ್ದಾಡುತ್ತಾರೆ. ಅಂತವರು ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಬುಧವಾರದಂದು ಈ ಪರಿಹಾರವನ್ನು ಮಾಡಿ.
ನಿಮ್ಮ ಮನೆಯ ನೈರುತ್ಯ ದಿಕ್ಕಿನಲ್ಲಿ ಒಂದು ಪೀಠವನ್ನು ಇಟ್ಟು ಅದನ್ನು ಗಂಜಲದಿಂದ ತೊಳೆದು ಅದರ ಮೇಲೆ ಅಕ್ಕಿಹಿಟ್ಟಿನಿಂದ ರಂಗೋಲಿ ಬರೆದು, ಅದರ ಮಧ್ಯದಲ್ಲಿ ವೀಳ್ಯದೆಲೆ ಇಟ್ಟು ಅರಶಿನದ ಗಣಪತಿಯನ್ನು ಮಾಡಿ ಅದರ ಮೇಲಿಟ್ಟು ಅದರ ನೆತ್ತಿಯ ಮೇಲೆ ಅರಶಿನ ಕುಂಕುಮ ಹಾಕಿ. ಗಣಪತಿಗೆ ಗರಿಕೆಯನ್ನು ಇಟ್ಟ, ಕೆಂಪು ಅಕ್ಷತೆಯನ್ನು ಹಾಕುತ್ತಾ “ಓಂ ಸಂಕಟನಾಶಾಯ ಗಣೇಶಾಯ ನಮಃ” ಎಂಬ ಮಂತ್ರವನ್ನು 11 ಬಾರಿ ಜಪಿಸಬೇಕು.
ಗಣೇಶನಿಗೆ ಬಾಳೆಹಣ್ಣನ್ನು ನೈವೇದ್ಯವಾಗಿ ಅರ್ಪಿಸಿ, ಗಂಧ, ದೂಪ, ದೀಪಗಳಿಂದ ಪೂಜೆ ಮಾಡಿ. ಬಳಿಕ ಆ ಪೀಠವನ್ನು ಈಶಾನ್ಯ ದಿಕ್ಕಿನಲ್ಲಿಡಿ. ಆನಂತರ ಮರುದಿನ ಅದನ್ನು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಿ. ಇದರಿಂದ ನಿಮ್ಮ ಜೀವನದಲ್ಲಿ ಎದುರಾದಂತಹ ಸಂಕಷ್ಟಗಳು ದೂರವಾಗಿ ಆರ್ಥಿಕ ಜೀವನ ಸುಖಕರವಾಗಿರುತ್ತದೆ.