ಅನ್ನ, ಆಹಾರವನ್ನು ಹೆಚ್ಚಾಯ್ತು ಎಂದೋ ಅಥವಾ ಬೇಡವೆಂದೋ ಬಿಸಾಕುವ ಮೊದಲು, ಅಗತ್ಯಕ್ಕಿಂತ ಹೆಚ್ಚಾಗಿ ಊಟ ಬಡಿಸಿಕೊಂಡು ಬಾಳೆಯಲ್ಲಿ ಬಿಡುವ ಮನಸ್ಥಿತಿಯವರು ಈ ದೃಶ್ಯವನ್ನು ಒಮ್ಮೆ ನೋಡಲೇ ಬೇಕು.
ನಿಜಕ್ಕೂ ಹಸಿವಿನ ಮಹತ್ವವನ್ನು ಹೇಳುತ್ತದೆ ಈ ವಿಡಿಯೋ….. ರಸ್ತೆಯಲ್ಲಿ ಸಾಗುತ್ತಿದ್ದ ಬಡ ಮಕ್ಕಳು ಹೋಟೆಲ್ ಮುಂದೆ ಫೋಟೋದಲ್ಲಿದ್ದ ಊಟವನ್ನು ಮುಟ್ಟಿ ತಿಂದಂತೆ ಖುಷಿ ಪಡುತ್ತಿರುವ ದೃಶ್ಯ…. ಎಂತವರನ್ನು ಒಂದು ಕ್ಷಣ ಸಂಕಟಪಡುವಂತೆ ಮಾಡದಿರದು.
ಊಟವನ್ನು ಬೇಡ ಎಂದು ಬಿಸಾಕುವ ಮುನ್ನ ಒಮ್ಮೆ ಯೋಚಿಸಿ….. ಆಹಾರವನ್ನು ಹಾಳು ಮಾಡುವ ಬದಲು ನಾವು ಮನಸ್ಸು ಮಾಡಿದರೆ ಊಟಕ್ಕೂ ಪರದಾಡುವ ಅದೆಷ್ಟೋ ಬಡ ಮಕ್ಕಳ ಹೊತ್ತಿನ ಹೊಟ್ಟೆ ತುಂಬಿಸಬಹುದಲ್ಲವೇ?