ಷೇರು ಮಾರುಕಟ್ಟೆಯಲ್ಲಿ ವಹಿವಾಟು ಮಾಡುವವರು ಓದಲೇಬೇಕಾದ ಸುದ್ದಿ ಇದು. ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಾಪ್ತಾಹಿಕ ರಜೆಯ ಹೊರತಾಗಿ, ಕೆಲವು ವಿಶೇಷ ಹಬ್ಬಗಳ ಸಂದರ್ಭದಲ್ಲಿ ವಹಿವಾಟನ್ನು ಬಂದ್ ಮಾಡಲಾಗುತ್ತದೆ. ಇಂದು ಕೂಡ ಗುರುನಾನಕ್ ಜಯಂತಿಯ ಹಿನ್ನೆಲೆಯಲ್ಲಿ ಸ್ಟಾಕ್ ಮಾರ್ಕೆಟ್ ಬಂದ್ ಆಗಿದೆ.
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ತೆರೆಯುವುದಿಲ್ಲ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (ಎನ್‌ಎಸ್‌ಇ) ವಹಿವಾಟು ನಡೆಯುವುದಿಲ್ಲ. ಷೇರು ಮಾರುಕಟ್ಟೆ ರಜಾದಿನಗಳ ಪಟ್ಟಿಯ ಪ್ರಕಾರ, ಮಂಗಳವಾರ ಈಕ್ವಿಟಿ ವಿಭಾಗ, ಈಕ್ವಿಟಿ ಡೆರಿವೇಟಿವ್ಸ್ ವಿಭಾಗ, ಸರಕು ಉತ್ಪನ್ನಗಳ ವಿಭಾಗದಲ್ಲಿ ಯಾವುದೇ ವ್ಯವಹಾರ ಇರುವುದಿಲ್ಲ. ಅಷ್ಟೇ ಅಲ್ಲ, ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಇದು ಈ ವರ್ಷದ ಕೊನೆಯ ರಜಾದಿನವಾಗಿದೆ.
ಸ್ಟಾಕ್ ಮಾರುಕಟ್ಟೆಯ ಕ್ಯಾಲೆಂಡರ್ ವರ್ಷದಲ್ಲಿ ಟ್ರೇಡಿಂಗ್ ಕ್ಯಾಲೆಂಡರ್ ಪ್ರಕಾರ, ವ್ಯಾಪಾರ ರಜಾದಿನಗಳ ಕಾರಣ ಸ್ಟಾಕ್ ಮಾರುಕಟ್ಟೆಯನ್ನು 13 ದಿನಗಳವರೆಗೆ ಮುಚ್ಚಲಾಗುತ್ತದೆ. ಅಂದರೆ ನವೆಂಬರ್ 8ರ ರಜಾದಿನವು 2022ರ ಕೊನೆಯ ರಜಾದಿನವಾಗಿರುತ್ತದೆ. ಸರಕು ಉತ್ಪನ್ನಗಳ ವಿಭಾಗ ಮತ್ತು ಭಾರತದ ಅತಿದೊಡ್ಡ ಸರಕು ವಿನಿಮಯ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ ಆಫ್ ಇಂಡಿಯಾ (MCX) ಕೂಡ ಬೆಳಗ್ಗೆ 9 ರಿಂದ ಸಂಜೆ 5ರ ನಡುವೆ ಮುಚ್ಚಿರುತ್ತದೆ. ಸಂಜೆ 5 ರಿಂದ ರಾತ್ರಿ 11:30ರವರೆಗೆ ವಹಿವಾಟು ನಡೆಯಲಿದೆ. ರಾಷ್ಟ್ರೀಯ ಸರಕು ಮತ್ತು ಉತ್ಪನ್ನಗಳ ವಿನಿಮಯ ನಿಯಮಿತ (NCDEX) ವಹಿವಾಟು ಇಂದು ಎರಡೂ ಅವಧಿಗಳಲ್ಲಿ ಮುಚ್ಚಲ್ಪಡುತ್ತದೆ.
ಶನಿವಾರ-ಭಾನುವಾರ ವಾರದ ರಜೆ
ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಶನಿವಾರ ಮತ್ತು ಭಾನುವಾರ ವಾರದ ರಜಾದಿನಗಳಿರುತ್ತವೆ. ವಾರದ ಎರಡು ದಿನ ಷೇರುಪೇಟೆಯಲ್ಲಿ ವಹಿವಾಟು ನಡೆಯುವುದಿಲ್ಲ. ವಿಶೇಷ ಹಬ್ಬ, ರಾಷ್ಟ್ರೀಯ ದಿನಾಚರಣೆಗಳಂದು ಕೂಡ ವಹಿವಾಟನ್ನು ಬಂದ್ ಮಾಡಿರುತ್ತಾರೆ. ಷೇರು ಮಾರುಕಟ್ಟೆ ರಜಾದಿನಗಳ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ, ನೀವು BSE ವೆಬ್‌ಸೈಟ್‌ನಿಂದ ಮಾಹಿತಿಯನ್ನು ಪಡೆಯಬಹುದು.