ವಾಸ್ತವ್ಯ ಪ್ರಮಾಣ ಪತ್ರ ಇಲ್ಲದೆ ವಿದ್ಯುತ್ ಪಡೆಯಲು ಪರದಾಡುತ್ತಿದ್ದವರಿಗೆ ಕೆಇಆರ್ಸಿ ಶುಭ ಸುದ್ದಿ ನೀಡಿದೆ. ಯಾವುದೇ ಷರತ್ತು ಇಲ್ಲದೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅಧಿ ಸೂಚನೆಯನ್ನು ಹೊರಡಿಸಲಾಗಿದೆ.
ಮನೆ, ನಿವೇಶನ, ಬಡಾವಣೆ ಹಾಗೂ ಕೈಗಾರಿಕಾ ಘಟಕಗಳಿಗೆ ಅವುಗಳ ಬೇಡಿಕೆಯನ್ನು ಆಧರಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದ್ದು, ಹೀಗಾಗಿ ಇನ್ನು ಮುಂದೆ ವಿದ್ಯುತ್ ಸಂಪರ್ಕ ಪಡೆಯಲು ಕಟ್ಟಡ ಪ್ಲಾನ್ ಅನುಮೋದನೆ ಪಡೆಯುವ ಅಗತ್ಯವಿರುವುದಿಲ್ಲ.
ಹೊಸ ಅಧಿಸೂಚನೆ ಪ್ರಕಾರ ವಿದ್ಯುತ್ ಪಡೆಯಲು ಏಕೈಕ ಷರತ್ತು ಎಂದರೆ ಅರ್ಜಿ ಸಲ್ಲಿಸುವ ವ್ಯಕ್ತಿ ಕಟ್ಟಡದ ಮಾಲೀಕನಾಗಿರಬೇಕು ಅಥವಾ ಮನೆಯಲ್ಲಿ ವಾಸವಿರಬೇಕು ಎಂದು ನಿಯಮಾವಳಿಗಳಿಗೆ ತಿದ್ದುಪಡಿ ಮಾಡಲಾಗಿದೆ.