ಬೆಂಗಳೂರು: ಕೊರೊನಾ ಎರಡನೇ ಅಲೆ ಆರ್ಭಟ ತಣ್ಣಗಾಗುತ್ತಿದ್ದಂತೆ ಡೆಲ್ಟಾ ಪ್ಲಸ್ ಎಂಬ ರೂಪಾಂತರಿ ವೈರಾಣುವಿನ ಅಟ್ಟಹಾಸ ಆರಂಭವಾಗಿದ್ದು, ಶ್ವಾಸಕೋಶದ ಮೇಲೆ ಹೆಚ್ಚು ಅಪಾಯವನ್ನುಂಟು ಮಾಡುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
340 ಪ್ರಾಧ್ಯಾಪಕರ ನೇಮಕಾತಿ, ಸರ್ಕಾರದ ಅನುಮತಿ
ಶ್ವಾಸಕೋಶದ ಅಂಗಾಂಶಗಳತ್ತ ಡೆಲ್ಟಾ ವೈರಸ್ ಹೆಚ್ಚು ಆಕರ್ಷಿತವಾಗುವ ಗುಣ ಹೊಂದಿದೆ. ಹೀಗಾಗಿ ಹೆಚ್ಚು ಅಪಾಯಕಾರಿಯಾಗಿದೆ ಎಂದು ಕೇಂದ್ರ ಸರ್ಕಾರ ಕರ್ನಾಟಕ ಸೇರಿ 8 ರಾಜ್ಯಗಳಿಗೆ ಪತ್ರ ಬರೆದು ಎಚ್ಚರಿಸಿದೆ.
ಗಮನಿಸಿ…! 500 ರೂ. ನೋಟಿನಲ್ಲಿ ಹಸಿರು ಪಟ್ಟಿ ಗಾಂಧಿ ಚಿತ್ರದ ಬಳಿ ಇದ್ರೆ ನಕಲಿ ನೋಟು ವದಂತಿ ಬಗ್ಗೆ ಸ್ಪಷ್ಟನೆ
ಡೆಲ್ಟಾ ಪ್ಲಸ್ ಅತಿವೇಗವಾಗಿ ಹರಡಲಿದ್ದು, ಸರ್ಕಾರಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಪ್ರಮುಖವಾಗಿ ಕೇರಳ, ಮಹಾರಾಷ್ಟ್ರ ಸೇರಿದಂತೆ ಗಡಿ ಜಿಲ್ಲೆಗಳಲ್ಲಿನ ಜನ ಸಂಚಾರದ ಮೇಲೆ ತೀವ್ರ ನಿಗಾ ಇಟ್ಟು ಆರ್ ಟಿ ಪಿ ಸಿ ಆರ್ ಟೆಸ್ಟ್ ಕಡ್ಡಾಯ ಮಾಡಬೇಕು. ಬಸ್ ನಲ್ಲಿ ಸಂಚರಿಸುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ. ಈಗಾಗಲೇ ರಾಜ್ಯದಲ್ಲಿ ಡೆಲ್ಟಾ ಪ್ಲಸ್ ಎರಡು ಪ್ರಕರಣ ದೃಢಪಟ್ಟಿದ್ದು, 500 ಸ್ಯಾಂಪಲ್ ಗಳನ್ನು ಪರೀಕ್ಷೆಗಾಗಿ ಲ್ಯಾಬ್ ಗೆ ಕಳುಹಿಸಲಾಗಿದೆ. ವೈರಸ್ ಹರಡದಂತೆ ಸರ್ಕಾರದಿಂದ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.