ಪ್ರಾಣಿ ದಯಾ ಸಂಘದ ಕಾರ್ಯಕರ್ತರ ಸೋಗಿನಲ್ಲಿ ಬಂದು ಪ್ರೀತಿಯಿಂದ ಸಾಕಿದ ಶ್ವಾನವನ್ನು ತೆಗೆದುಕೊಂಡು ಹೋದ ಬಳಿಕ ಮನನೊಂದ 16 ವರ್ಷದ ಬಾಲಕಿ ತನ್ನ ತಾಯಿಯ ಬಿಪಿ ಮಾತ್ರೆಯನ್ನು ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಆರ್ಯುವೇದ ಔಷಧಿ ಮಾರಾಟಗಾರರಾದ ಧೂಮ್ ಸಿಂಗ್ ಎಂಬವರು, ಪ್ರಾಣಿ ದಯಾ ಸಂಘದ ಕಾರ್ಯಕರ್ತರಂತೆ ಮನೆಗೆ ಬಂದು ನಮ್ಮ ಮನೆಯಲ್ಲಿ ಪ್ರೀತಿಯಿಂದ ಸಾಕಿದ್ದ ಹೆಣ್ಣು ಜರ್ಮನ್ ಶೆಫರ್ಡ್ ನಾಯಿಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಮುಂಬೈನ ಎಂಐಡಿಸಿ ಪೊಲೀಸರು ಹೇಮಾ ಚೌಧರಿ ಹಾಗೂ ಇತರೆ ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ.
ಆರೋಪಿಗಳ ನಮಗೆ ಅನೇಕ ಬಾರಿ ಕಿರುಕುಳ ನೀಡಿದ್ದಾರೆ ಎಂದು ಧೂಮ್ ಸಿಂಗ್ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೇ ನಮ್ಮ ಶ್ವಾನವನ್ನು ನಮಗೆ ವಾಪಸ್ ನೀಡಿ ಎಂದು ಮನವಿ ಮಾಡಿದ್ದಾರೆ.