
ನಂದಕಿಶೋರ್ ನಿರ್ದೇಶನದ ಶ್ರೇಯಸ್ ಅಭಿನಯದ ಬಹುನಿರೀಕ್ಷಿತ ರಾಣಾ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಕಾಂತಾರ ಸಿನಿಮಾದ ಅಬ್ಬರದ ನಡುವೆಯೂ ರಾಣ ಚಿತ್ರ ಹೌಸ್ ಫುಲ್ ಆಗಿದೆ. ಮಾಸ್ ಎಂಟರ್ ಟೇನರ್ ಲವ್ ಸ್ಟೋರಿ ಕಥೆ ಆಧಾರಿತ ಈ ಸಿನಿಮಾಗಾಗಿ ನಿರ್ಮಾಪಕ ಕೆ. ಮಂಜು ಪುತ್ರ ನಟ ಶ್ರೇಯಸ್ ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ
ಈ ಚಿತ್ರದಲ್ಲಿ ಶ್ರೇಯಸ್ ಗೆ ಜೋಡಿಯಾಗಿ ರೇಷ್ಮಾ ನಾಣಯ್ಯ ಅಭಿನಯಿಸಿದ್ದು, ಗುಜ್ಜಲ್ ಪುರುಷೋತ್ತಮ್ ತಮ್ಮ ಗುಜ್ಜಲ್ ಟಾಕೀಸ್ ಬ್ಯಾನರ್ ನಡಿ ಬಂಡವಾಳ ಹೂಡಿದ್ದಾರೆ.
ಈ ಸಿನಿಮಾದಲ್ಲಿ ಅಶೋಕ್ ಗಿರಿ ಸೇರಿದಂತೆ ಪ್ರವೀಣ್ ಕುಮಾರ್, ಮೋಹನ್, ನಯನ ರಘು ರಜನಿ ಭಾರದ್ವಾಜ್ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ. ರ್ಯಾಪರ್ ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ನೀಡಿದ್ದಾರೆ.