ಕ್ರಿಕೆಟ್, ಜಗತ್ತಿನ ಜನಪ್ರಿಯ ಆಟಗಳಲ್ಲಿ ಒಂದು. ಭಾರತೀಯರಿಗಂತೂ ಬಹಳ ಇಷ್ಟವಾದ ಕ್ರೀಡೆ ಇದು. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ರೋಹಿತ್ ಶರ್ಮಾ ಮತ್ತು ಮಹೇಂದ್ರ ಸಿಂಗ್ ಧೋನಿಯಂತಹ ಸ್ಟಾರ್ ಆಟಗಾರರಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಅನೇಕ ಕ್ರಿಕೆಟಿಗರು ಅಪಾರ ಸಂಪತ್ತನ್ನು ಹೊಂದಿದ್ದಾರೆ. ಆದರೆ ಅವರಲ್ಲಿ ಯಾರೂ ಭಾರತದ ಶ್ರೀಮಂತ ಕ್ರಿಕೆಟಿಗರಲ್ಲ. ಅಚ್ಚರಿಯಾದ್ರೂ ಇದು ಸತ್ಯ.
ವಿರಾಟ್ ಕೊಹ್ಲಿ ಅವರ ನಿವ್ವಳ ಆಸ್ತಿ ಮೌಲ್ಯ ಸುಮಾರು 1000 ಕೋಟಿ ರೂಪಾಯಿ. ವಿರಾಟ್ ಕೊಹ್ಲಿ ಪ್ರಸ್ತುತ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ವಿರಾಟ್ ಕೊಹ್ಲಿ ಬಿಸಿಸಿಐ ಒಪ್ಪಂದದ “ಎ+” ಪಟ್ಟಿಯಲ್ಲಿದ್ದಾರೆ ಮತ್ತು ವಾರ್ಷಿಕವಾಗಿ 7 ಕೋಟಿ ಪಡೆಯುತ್ತಾರೆ. ಟೆಸ್ಟ್‌ಗೆ 15 ಲಕ್ಷ, ಏಕದಿನಕ್ಕೆ 6 ಲಕ್ಷ ಮತ್ತು ಟಿ20 ಪಂದ್ಯಕ್ಕೆ 3 ಲಕ್ಷ ರೂಪಾಯಿ ಸಂಭಾವನೆ, ಐಪಿಎಲ್ ಫ್ರಾಂಚೈಸಿಗಳು ಆರ್‌ಸಿಬಿಯಿಂದ ವಾರ್ಷಿಕವಾಗಿ 15 ಕೋಟಿ ರೂಪಾಯಿ ಆದಾಯ ಪಡೆಯುತ್ತಾರೆ.
ಸಚಿನ್ ತೆಂಡೂಲ್ಕರ್ ಅವರ ನಿವ್ವಳ ಮೌಲ್ಯ ಅಂದಾಜು 1,250 ಕೋಟಿ ರೂಪಾಯಿಯಷ್ಟಿದೆ. ಮಾಜಿ ನಾಯಕ ಎಂಎಸ್ ಧೋನಿ ಅವರ ನಿವ್ವಳ ಮೌಲ್ಯ 1,040 ಕೋಟಿ ರೂಪಾಯಿ ಅಂತ ಹೇಳಲಾಗುತ್ತಿದೆ. ಆದರೆ ವರದಿಯ ಪ್ರಕಾರ ಸಮರ್ಜಿತ್ ಸಿಂಗ್ ರಂಜಿತ್ ಸಿಂಗ್ ಗಾಯಕ್ವಾಡ್ ಅತ್ಯಂತ ಶ್ರೀಮಂತ ಭಾರತೀಯ ಕ್ರಿಕೆಟರ್. 1967, ಎಪ್ರಿಲ್ 25ರಂದು ಜನಿಸಿದ ಸಮರ್ಜಿತ್ ಸಿಂಗ್ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗರು. ಇವರು ಬರೋಡಾದ ಮಾಜಿ ರಾಜ. ರಂಜಿತ್ ಸಿಂಗ್ ಪ್ರತಾಪ್ ಸಿಂಗ್ ಗಾಯಕ್ವಾಡ್ ಮತ್ತು ಶುಭಾಂಗಿನಿ ರಾಜೆ ಅವರ ಏಕೈಕ ಪುತ್ರ. ಡೆಹ್ರಾಡೂನ್‌ನ ಡೂನ್ ಶಾಲೆಯಲ್ಲಿ ಓದಿದ್ದಾರೆ.
ಅವರ ಆಸ್ತಿ ಎಷ್ಟು ?
ಸಮರ್ಜಿತ್ ಸಿಂಗ್ ಗಾಯಕ್ವಾಡ್ ಅವರ ತಂದೆಯ ಮರಣದ ನಂತರ ಮೇ 2012 ರಲ್ಲಿ ಮಹಾರಾಜ ಪಟ್ಟ ಅಲಂಕರಿಸಿದರು. ಅವರು 20,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಪಿತ್ರಾರ್ಜಿತ ಆಸ್ತಿ ಹೊಂದಿದ್ದಾರೆ. ವಿಶ್ವದ ಅತಿದೊಡ್ಡ ಖಾಸಗಿ ನಿವಾಸವಾದ ಲಕ್ಷ್ಮಿ ವಿಲಾಸ್ ಅರಮನೆಯ ಮಾಲೀಕರಾಗಿದ್ದಾರೆ. ಗುಜರಾತ್ ಮತ್ತು ಉತ್ತರ ಪ್ರದೇಶದ ಬನಾರಸ್‌ನಲ್ಲಿ 17 ದೇವಾಲಯಗಳನ್ನು ನಡೆಸುತ್ತಿರುವ ದೇವಾಲಯದ ಟ್ರಸ್ಟ್ ಅನ್ನು ಸಹ ನಿಯಂತ್ರಿಸುತ್ತಾರೆ.
ಸಮರ್ಜಿತ್ ಸಿಂಗ್ ಗಾಯಕ್ವಾಡ್ ಅವರು ರಾಧಿಕಾರಾಜ ಅವರನ್ನು ವಿವಾಹವಾದರು. ಆಕೆಯೂ ವಾಂಕನೇರ್ ರಾಜ್ಯದ ರಾಜ ಮನೆತನದವರು. ಸಮರ್ಜಿತ್ ಸಿಂಗ್ ಗಾಯಕ್ವಾಡ್ ರಣಜಿ ಟ್ರೋಫಿಯಲ್ಲಿ ಬರೋಡಾವನ್ನು ಪ್ರತಿನಿಧಿಸಿದ್ದರು. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಆರು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಬರೋಡಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.