ಖುಷಿಯಾಗಿರಲು ನೀವು ಬಯಸಿದ್ದರೆ ಕೇವಲ ಈ ಒಂದು ಕೆಲಸವನ್ನು ಮಾಡಬೇಕು. ಶುಭ ದಿನದಲ್ಲಿ ನಿಮ್ಮ ಮನೆಗೆ ಈ ವಸ್ತುವನ್ನು ತನ್ನಿ.
ನವಿಲು ಗರಿ ಶ್ರೀಕೃಷ್ಣನಿಗೆ ಪ್ರಿಯವಾಗಿದ್ದು. ಧರ್ಮದ ಹೊರತಾಗಿ ಜ್ಯೋತಿಷ್ಯದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ನವಿಲು ಗರಿ ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಮನೆಯ ಜನರ ಅದೃಷ್ಟ ಬದಲಾಗುತ್ತದೆ. ಒಂದು ಅಥವಾ ಮೂರು ನವಿಲು ಗರಿಗಳನ್ನು ಮನೆಗೆ ತಂದರೆ ಇಡೀ ವರ್ಷ ಸಂಪತ್ತು ನೆಲೆಸಿರುತ್ತದೆ.
ಶಮಿ ಗಿಡಕ್ಕೂ ಹಿಂದು ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ಮನೆಯಲ್ಲಿ ಶಮಿ ಗಿಡವಿದ್ದರೆ ಹಣದ ಸಮಸ್ಯೆ ಕಾಡುವುದಿಲ್ಲ. ವಾಸ್ತು ದೋಷಗಳನ್ನು ಇದು ನಿವಾರಿಸುತ್ತದೆ. ಹಾಗಾಗಿ ಶಮಿ ಗಿಡವನ್ನು ಮನೆಗೆ ತನ್ನಿ.
ವಾಸ್ತು ಶಾಸ್ತ್ರದಲ್ಲಿ ಸೂರ್ಯೋದಯದ ಫೋಟೋ ಅತ್ಯಂತ ಮಂಗಳಕರವೆನ್ನಲಾಗಿದೆ. ಇದು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಮನೆಗೆ ಸೂರ್ಯೋದಯದ ಫೋಟೋ ತಂದಿಟ್ಟರೆ ಮನೆಯಲ್ಲಿ ಆರ್ಥಿಕ ಪ್ರಗತಿಯಾಗಲಿದೆ.
ಕನಸಿನಲ್ಲಿ ಆನೆ ಕಾಣುವುದು ಮಂಗಳಕರ. ಮನೆಯಲ್ಲಿ ಬೆಳ್ಳಿಯ ಆನೆಯನ್ನು ಇಡುವುದರಿಂದ ಸಂಪತ್ತು ಹೆಚ್ಚಾಗುತ್ತದೆ. ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸುತ್ತದೆ.