
ಶ್ರೀನಗರ ಕಿಟ್ಟಿ ಇಂದು 45ನೇ ವಸಂತಕ್ಕೆ ಕಾಲಿಟ್ಟಿದ್ದು ಅವರ ಅಭಿಮಾನಿಗಳಿಂದ ಹಾಗೂ ಸಿನೆಮಾ ಕಲಾವಿದರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
ಶ್ರೀನಗರ ಕಿಟ್ಟಿ ನಟನೆಯ ಬಹುನಿರೀಕ್ಷಿತ ಗೌಳಿ ಸಿನಿಮಾ ಈಗ ಭರ್ಜರಿ ಸೌಂಡ್ ಮಾಡಿದ್ದು ಇಂದು ಅವರ ಹುಟ್ಟುಹಬ್ಬದ ಪ್ರಯುಕ್ತ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡುವ ಮೂಲಕ ಶ್ರೀನಗರ ಕಿಟ್ಟಿ ಅವರಿಗೆ ಚಿತ್ರತಂಡ ಶುಭಾಶಯ ತಿಳಿಸಿದ್ದು, ಶೀಘ್ರದಲ್ಲೇ ಟ್ರೈಲರ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ.
ಸೂರ ನಿರ್ದೇಶನದ ಈ ಚಿತ್ರವನ್ನು ಸೋಹನ್ ಫಿಲ್ಮ್ ಫ್ಯಾಕ್ಟರಿ ಲಾಂಛನದಲ್ಲಿ ರಘು ಸಿಂಗಮ್ ನಿರ್ಮಾಣ ಮಾಡಿದ್ದು ಪಾವನಾ ಗೌಡ ನಾಯಕಿಯಾಗಿ ಅಭಿನಯಿಸಿದ್ದಾರೆ. ಯಶ್ ಶೆಟ್ಟಿ ಕಾಕ್ರೋಚ್ ಸುಧಿ ರಂಗಾಯಣ ರಘು ಶರತ್ ಲೋಹಿತಾಶ್ವ ಸೇರಿದಂತೆ ಹಲವರ ತಾರಾಬಳಗವಿದೆ. ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆ ನೀಡಿದ್ದಾರೆ.
