ರಾಮನಗರ- ಕಂಚುಗಲ್ ಬಂಡೆಮಠದ ಸ್ವಾಮೀಜಿ ಮಠದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಗಣ್ಯವ್ಯಕ್ತಿಗಳು ಸೇರಿದಂತೆ ವಿವಿಧ ಮಠದ 50ಕ್ಕೂ ಹೆಚ್ಚು ಸ್ವಾಮೀಜಿಗಳ ಸಮ್ಮುಖದಲ್ಲಿ ಲಿಂಗಾಯತ ಸಂಪ್ರದಾಯದಂತೆ ಬಸವಲಿಂಗ ಸ್ವಾಮೀಜಿ ಅಂತ್ಯಸಂಸ್ಕಾರ ನಡೆದಿದೆ. ಸ್ವಾಮೀಜಿಯವರ ದೇಹವೂ ನೇಣುಬಿಗಿದ ರೀತಿಯಲ್ಲಿ ಪತ್ತೆಯಾಗಿರೋದು ಇತರ ಮಠಗಳ ಶ್ರೀಗಳು ಹಾಗೂ ಭಕ್ತರಲ್ಲಿ ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ.
ಇನ್ನು ಸಾಯುವ ಮುನ್ನ ಸ್ವಾಮೀಜಿ ಮೂರು ಪುಟಗಳ ಡೆತ್ ನೋಟ್ ಬರೆದಿದ್ದು, ಮರ್ಯಾದೆಗೆ ಅಂಜಿ ಈ ರೀತಿ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ ಎನ್ನಲಾಗಿದೆ. ಇನ್ನು ಡೆತ್ ನೋಟ್ನಲ್ಲೂ ಒಂದಿಷ್ಟು ವಿಚಾರಗಳನ್ನು ಬರೆದಿದ್ದಾರೆ ಶ್ರೀಗಳು. ಮುಖ್ಯವಾಗಿ ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಯಾರ ಸಹಾಯವೂ ಇರಲಿಲ್ಲ. ಅಷ್ಟೆ ಅಲ್ಲ ಕೆಲವರಿಂದ ಬೆದರಿಕೆ ಕರೆಗಳು ಸಹ ಬಂದಿವೆ ಎಂದು ಬರೆದಿದ್ದಾರೆ.
ನೇಣು ಬಿಗಿದ ಸ್ಥಿತಿಯಲ್ಲಿ ಶ್ರೀಗಳ ಮೃತದೇಹ ಪತ್ತೆಯಾಗಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ ಈ ರೀತಿ ಸ್ವಾಮೀಜಿಗಳ ಸಾಲು ಸಾಲು ಆತ್ಮಹತ್ಯೆ ಗಳು ಕೂಡ ಅನೇಕ ಅನುಮಾನ ಗಳಿಗೆ ಕಾರಣವಾಗಿದೆ. ಇನ್ನು ಡೆತ್ ನೋಟ್ನಲ್ಲಿ ಇರುವ ಅನೇಕ ವಿಚಾರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆದರೂ ವೈಯಕ್ತಿಕ ವಿಚಾರಗಳಿಗೆ ಸ್ವಾಮೀಜಿ ಈ ರೀತಿ ಮಾಡಿಕೊಂಡ್ರಾ ಅಥವಾ ಬೇರೆಯವರ ಬೆದರಿಕೆಗೆ ಈ ರೀತಿ ನೇಣಿಗೆ ಕೊರಳೊಡ್ಡಿದ್ರಾ ಅನ್ನೋದು ತನಿಖೆಯಿಂದ ಬಯಲಾಗಬೇಕಿದೆ.