ಎಲ್ಲರ ಮನೆಯಲ್ಲಿ ಶ್ರೀಕೃಷ್ಣನ ಬಾಲ್ಯದ ಮೂರ್ತಿಗಳಿದ್ದೇ ಇರುತ್ತವೆ. ಬಾಲ ಗೋಪಾಲನ ಪೂಜೆ ವಿಧಾನವನ್ನು ವಾಮನ ಪುರಾಣದಲ್ಲಿ ಹೇಳಲಾಗಿದೆ. ಅದ್ರ ಪ್ರಕಾರ ನಡೆದುಕೊಂಡಲ್ಲಿ ಶ್ರೀಕೃಷ್ಣ ಭಕ್ತರಿಗೆ ಬಹುಬೇಗ ಕೃಪೆ ತೋರುತ್ತಾನೆ ಎಂದು ನಂಬಲಾಗಿದೆ.
ಪುರಾಣದ ಪ್ರಕಾರ ಪ್ರತಿದಿನ ಬಾಲ ಗೋಪಾಲನ ಪೂಜೆ ಮಾಡುವ ಮೊದಲು ಮೂರ್ತಿಗೆ ಸ್ನಾನ ಮಾಡಬೇಕು. ಶ್ರೀಕೃಷ್ಣನಿಗೆ ಸ್ನಾನ ಮಾಡುವಾಗ ಬಿಳಿ ಎಳ್ಳು ಅಥವಾ ಬಿಳಿ ಎಳ್ಳಿನ ಎಣ್ಣೆಯನ್ನು ತುಪ್ಪಕ್ಕೆ ಬೆರೆಸಿ ಬಳಸಬೇಕು.
ಸ್ನಾನದ ನಂತ್ರ ಶುದ್ಧ ಬಟ್ಟೆಯಲ್ಲಿ ಶ್ರೀಕೃಷ್ಣನ ಮೂರ್ತಿಯನ್ನು ಸ್ವಚ್ಛಗೊಳಿಸಿ ಸುಂದರ ವಸ್ತ್ರ, ರತ್ನ, ಆಭರಣಗಳಿಂದ ಅಲಂಕಾರ ಮಾಡಬೇಕು.
ಭಗವಂತ ಶ್ರೀಕೃಷ್ಣನ ಪಾದದಿಂದ ಹಿಡಿದು ತಲೆಯವರೆಗೆ ಹೂವನ್ನು ಹಾಕಿ ಪೂಜೆ ಮಾಡಬೇಕು.
ಶ್ರೀಕೃಷ್ಣನ ಪೂಜೆ ವೇಳೆ ತುಪ್ಪದ ದೀಪವನ್ನು ಹಚ್ಚಬೇಕು. ಪೂಜೆ ನಂತ್ರ ದೀಪವನ್ನು ದಾನ ಮಾಡುವುದನ್ನು ಶುಭವೆಂದು ಪರಿಗಣಿಸಲಾಗಿದೆ.
ಪೂಜೆ ಮಾಡುವ ವೇಳೆ ಬೇರೆ ಬೇರೆ ಸುವಾಸನೆಯ ಧೂಪ-ಅಗರಬತ್ತಿಯನ್ನು ಶ್ರೀಕೃಷ್ಣನ ಮುಂದೆ ಹಚ್ಚಬೇಕು.