ಶ್ರಾವಣ ಸೋಮವಾರದ ವ್ರತ ಬಹಳ ಶ್ರೇಷ್ಠ. ಸೋಮವಾರದ ದಿನ ಭಗವಂತ ಶಿವನ ಹಾಗೂ ಪಾರ್ವತಿ ಜೊತೆಗೆ ಶಿವಲಿಂಗದ ಪೂಜೆ ಮಾಡುವುದರಿಂದ ಈಶ್ವರನ ಕೃಪೆಗೆ ಪಾತ್ರರಾಗಬಹುದು. ಸೋಮವಾರ ಶಿವನ ಪೂಜೆ ಮಾಡುವುದರಿಂದ ವಿಶೇಷ ಫಲ ಪ್ರಾಪ್ತಿಯಾಗಲಿದೆ. ಈಶ್ವರನಿಗೆ ಕೆಲವೊಂದು ವಸ್ತುಗಳೆಂದ್ರೆ ಬಹಳ ಇಷ್ಟ. ಶ್ರಾಣವ ಸೋಮವಾರ ಶಿವನಿಗೆ ಪ್ರಿಯವಾದ ವಸ್ತುಗಳನ್ನು ಮನೆಗೆ ತರುವುದು ಶುಭವೆಂದು ಪರಿಗಣಿಸಲಾಗಿದೆ.
ಭಸ್ಮ ಭಗವಂತ ಶಿವನಿಗೆ ಪ್ರಿಯವಾದ ವಸ್ತುಗಳಲ್ಲಿ ಒಂದು. ಶ್ರಾವಣ ಸೋಮವಾರ ಭಸ್ಮವನ್ನು ಖರೀದಿ ಮಾಡಿ ದೇವರ ಮನೆಯಲ್ಲಿ ಶಿವನ ಮೂರ್ತಿ ಬಳಿ ಅವಶ್ಯವಾಗಿಡಿ.
ರುದ್ರಾಕ್ಷಿಯನ್ನು ಸೃಷ್ಟಿಸಿದವ ಶಿವನೆನ್ನಲಾಗುತ್ತದೆ. ಶ್ರಾವಣ ಮಾಸದಲ್ಲಿ ರುದ್ರಾಕ್ಷಿ ತಂದು ಮನೆಯ ಮುಖ್ಯ ಕೋಣೆಯಲ್ಲಿಡಿ.
ಗಂಗಾಜಲ ಬಹಳ ಪವಿತ್ರವಾದದ್ದು. ಗಂಗಾಜಲವನ್ನು ಅಡುಗೆ ಮನೆಯಲ್ಲಿಡಿ. ಇದ್ರಿಂದ ಮನೆಯಲ್ಲಿ ಸುಖ, ಸಮೃದ್ಧಿ, ಶಾಂತಿ ನೆಲೆಸಿರುತ್ತದೆ.
ಬೆಳ್ಳಿಯ ಜೋಡಿ ಸರ್ಪದ ಅಚ್ಚನ್ನು ಮನೆಯ ಮುಖ್ಯ ದ್ವಾರದ ಕೆಳಗಿಡಿ. ಇದು ಎಲ್ಲ ರೀತಿಯ ವಾಸ್ತು ದೋಷವನ್ನು ನಿವಾರಣೆ ಮಾಡುತ್ತದೆ.
ಮನೆಯ ಸದಸ್ಯರು ಹೆಚ್ಚು ಸಮಯ ಕಳೆಯುವ ಕೋಣೆಯಲ್ಲಿ ತಾಮ್ರದ ಲೋಟದಲ್ಲಿ ನೀರಿಡಿ. ಕುಟುಂಬದ ಸದಸ್ಯರಲ್ಲಿ ಸದಾ ಪ್ರೀತಿ ನೆಲೆಸಿರಲು ಇದು ಸಹಕಾರಿ.
ಮಕ್ಕಳ ಕೋಣೆಯಲ್ಲಿ ಡಮರನ್ನಿಡಿ. ಇದ್ರಿಂದ ಯಾವುದೇ ನಕಾರಾತ್ಮಕ ಶಕ್ತಿ ಮಕ್ಕಳ ಮೇಲೆ ಪ್ರಭಾವ ಬೀರುವುದಿಲ್ಲ. ಎಲ್ಲ ಕೆಲಸದಲ್ಲೂ ಸಫಲತೆ ಸಿಗುತ್ತದೆ.