alex Certify ಶ್ರಾವಣ ಮಾಸದಲ್ಲಿ ಮಹಿಳೆಯರು ಏಕೆ ಧರಿಸಬೇಕು ಹಸಿರು ಬಣ್ಣದ ಬಳೆ.…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರಾವಣ ಮಾಸದಲ್ಲಿ ಮಹಿಳೆಯರು ಏಕೆ ಧರಿಸಬೇಕು ಹಸಿರು ಬಣ್ಣದ ಬಳೆ.…?

ಶ್ರಾವಣ ಮಾಸ ಶಿವ ಭಕ್ತರ ಜೊತೆ ಮಹಿಳೆಯರಿಗೂ ವಿಶೇಷವಾದದ್ದು. ಶ್ರಾವಣ ಮಾಸ ಬರ್ತಿದ್ದಂತೆ ಹಸಿರು ಕಣ್ಮನ ಸೆಳೆಯುತ್ತದೆ. ಹಸಿರು ಸೌಭಾಗ್ಯದ ಸಂಕೇತ. ಶ್ರಾವಣ ಮಾಸದಲ್ಲಿ ಬಹುತೇಕ ಮಹಿಳೆಯರು ಹಸಿರು ತೊಡಲು ಇಷ್ಟಪಡ್ತಾರೆ. ಹಸಿರು ಬಣ್ಣ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.

ಶ್ರಾವಣ ಮಾಸದಲ್ಲಿ ಮಹಿಳೆಯರು ಹಸಿರು ಬಣ್ಣದ ಬಳೆಯನ್ನು ಧರಿಸುತ್ತಾರೆ. ಶ್ರಾವಣ ಮಾಸದಲ್ಲಿ ಹಸಿರು ಬಣ್ಣದ ಬಳೆ ಹಾಗೂ ಬಟ್ಟೆ ಧರಿಸುವುದ್ರಿಂದ ಶಿವನ ಕೃಪೆಗೆ ಪಾತ್ರರಾಗಬಹುದೆಂದು ನಂಬಲಾಗಿದೆ. ಪತಿಯ ಆಯಸ್ಸು ವೃದ್ಧಿಯಾಗುತ್ತದೆ. ಬುಧ ಗ್ರಹ ಹಸಿರು ಬಣ್ಣಕ್ಕೆ ಸಂಬಂಧಿಸಿದ್ದಾಗಿದೆ.

ಬುಧ ಗ್ರಹದಲ್ಲಾಗುವ ಬದಲಾವಣೆ ಜೀವನದ ಏರುಪೇರಿಗೆ ಕಾರಣವಾಗುತ್ತದೆ. ಶ್ರಾವಣ ಮಾಸದಲ್ಲಿ ಹಸಿರು ಬಣ್ಣವನ್ನು ಬಳಸಿ ಬುಧ ಗ್ರಹವನ್ನು ಪ್ರಸನ್ನಗೊಳಿಸಿದ್ರೆ ಜೀವನದಲ್ಲಿ ಯಶಸ್ಸು ಕಾಣಬಹುದಾಗಿದೆ. ಸುಮಂಗಲಿಯರು ಹಸಿರು ಬಣ್ಣದ ಬಟ್ಟೆ ಅಥವಾ ಬಳೆ ಧರಿಸುವುದ್ರಿಂದ ಸಂಪನ್ನತೆ ಪ್ರಾಪ್ತಿಯಾಗುತ್ತದೆ.

ಹಸಿರು ಬಣ್ಣ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಮದುವೆ ನಂತ್ರ ದಾಂಪತ್ಯದಲ್ಲಿ ಖುಷಿ ಸಿಗದ ಮಹಿಳೆಯರು ಬೆಡ್ ರೂಮಿನ ದಕ್ಷಿಣ-ಆಗ್ನೇಯ ದಿಕ್ಕಿನಲ್ಲಿ ಹಸಿರು ಬಣ್ಣವನ್ನು ಬಳಸಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...