ಶ್ರಾವಣ ಮಾಸ ಹತ್ತಿರ ಬರ್ತಿದೆ. ಎಲ್ಲೆಡೆ ತಯಾರಿ ಜೋರಾಗಿ ನಡೆದಿದೆ. ಶ್ರಾವಣ ಮಾಸದಲ್ಲಿ ಶಿವನ ಆರಾಧನೆಗೆ ಭಕ್ತರು ಸಿದ್ಧತೆ ನಡೆಸುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದು ದೇವಾನುದೇವತೆಗೆ ಮಹತ್ವವಿದೆ. ಹಾಗೆ ಆಯಾ ದೇವರಿಗೆ ಯಾವುದು ಪ್ರಿಯ, ಯಾವುದು ಅಪ್ರಿಯ ಎಂಬುದನ್ನೂ ಹೇಳಲಾಗಿದೆ.
ಶಿವನ ಭಕ್ತರಿಗೆ ಶಿವನಿಗೆ ಯಾವುದು ಅಪ್ರಿಯ ಎಂಬುದು ಗೊತ್ತಿರಬೇಕು. ಅಪ್ಪಿತಪ್ಪಿ ಶಿವಲಿಂಗಕ್ಕೆ ಅಪ್ರಿಯ ವಸ್ತುಗಳನ್ನು ಅರ್ಪಿಸಿದ್ರೆ ಶಿವ ಕೋಪಗೊಳ್ತಾನೆ.
ಸಾಮಾನ್ಯವಾಗಿ ಗಂಗಾಜಲವನ್ನು ತುಳಸಿ ಜೊತೆ ಶಿವಲಿಂಗಕ್ಕೆ ಜನರು ಅರ್ಪಿಸುತ್ತಾರೆ. ಆದ್ರೆ ತುಳಸಿ ಎಲೆ ಶಿವ ಪ್ರಿಯವಲ್ಲ. ಅದು ವಿಷ್ಣುವಿಗೆ ಪ್ರಿಯವಾದದ್ದು. ಹಾಗಾಗಿ ಶಿವನಿಗೆ ತುಳಸಿ ಅರ್ಪಿಸಬೇಡಿ. ಹಾಗೆ ಪಂಚಾಮೃತದಲ್ಲಿ ತುಳಸಿ ಬೆರೆಸಬೇಡಿ.
ಶಿವನ ಪೂಜೆಯಿಂದ ತೆಂಗಿನ ಕಾಯಿಯನ್ನು ದೂರವಿಡಿ. ಶಿವ ಪೂಜೆಗೆ ತೆಂಗಿನಕಾಯಿ ಬಳಸಬೇಡಿ. ವಿಷ್ಣು ಹಾಗೂ ಲಕ್ಷ್ಮಿ ಪೂಜೆಗೆ ಇದನ್ನು ಬಳಸಬಹುದು.
ಭಗವಂತ ಶಿವನಿಗೆ ಅನೇಕರು ಕುಂಕುಮದ ತಿಲಕವಿಡ್ತಾರೆ. ಆದ್ರೆ ಶಿವನ ಪೂಜೆ ವೇಳೆ ಕುಂಕುಮದ ಬದಲು ಚಂದನದ ಭಸ್ಮ ತೆಗೆದುಕೊಂಡು ಹೋಗಿ. ಕುಂಕುಮ ಸೌಭಾಗ್ಯದ ಸಂಕೇತ. ತಾಯಿ ಪಾರ್ವತಿಗೆ ಇದನ್ನು ಅರ್ಪಿಸಬಹುದು. ಶಿವನಿಗಲ್ಲ. ಅರಿಶಿನವನ್ನು ಕೂಡ ಶಿವನಿಗೆ ಅರ್ಪಿಸಬೇಡಿ.