‘ಶೋಲೆ’ ಬಾಲಿವುಡ್ ನ ಅತ್ಯಂತ ಜನಪ್ರಿಯ ಚಿತ್ರ. ಜೈ ಮತ್ತು ವೀರೂ ದೋಸ್ತಿಗೆ ಫಿದಾ ಆಗದವರೇ ಇಲ್ಲ. ‘ಶೋಲೆ’ ಚಿತ್ರ ಸಿನಿ ದುನಿಯಾದಲ್ಲಾದ ಕ್ರಾಂತಿ ಅಂದ್ರೂ ತಪ್ಪಾಗಲಾರದು. ಆದ್ರೆ ‘ಶೋಲೆ’ ಸಿನಿಮಾ ಒಂದೆರಡು ತಿಂಗಳುಗಳಲ್ಲಿ ತಯಾರಾದ ಚಿತ್ರವಲ್ಲ.
ಚಿತ್ರದ ಒಂದೇ ಒಂದು ದೃಶ್ಯವನ್ನು ಅದ್ಭುತವಾಗಿ ಚಿತ್ರೀಕರಿಸಬೇಕು ಅನ್ನೋ ಕಾರಣಕ್ಕೆ ನಿರ್ದೇಶಕ ರಮೇಶ್ ಸಿಪ್ಪಿ 3 ವರ್ಷ ಕಾದಿದ್ದರಂತೆ.
ಜಯಾ ಬಚ್ಚನ್ ಕಾರಿಡಾರ್ ನಲ್ಲಿ ಲ್ಯಾಂಪ್ ಒಂದನ್ನು ಬೆಳಗಿಸ್ತಾರೆ, ಆಗ ಅಮಿತಾಭ್ ಬಚ್ಚನ್ ಔಟ್ ಹೌಸ್ನಲ್ಲಿ ಕುಳಿತು ಮೌತ್ ಆರ್ಗನ್ ಬಾರಿಸುತ್ತಿರುತ್ತಾರೆ. ‘ಶೋಲೆ’ ಚಿತ್ರದ ಆ ದೃಶ್ಯಕ್ಕೆ ಸೂಕ್ತವಾದ ಬೆಳಕು ಬೇಕಿತ್ತು.
ಸೂರ್ಯಾಸ್ತದ ಸಮಯದಲ್ಲಿ ಈ ದೃಶ್ಯ ಶೂಟ್ ಮಾಡಿದ್ರೆ ಚೆನ್ನ ಅಂತಾ ನಿರ್ದೇಶಕರಿಗೆ ಅನಿಸಿತ್ತು. ಆ ಪರ್ಫೆಕ್ಟ್ ಸೀನ್ ಗಾಗಿ ನಿರ್ದೇಶಕ ರಮೇಶ್ ಸಿಪ್ಪಿ ಮೂರು ವರ್ಷ ಕಾದಿದ್ದರು ಎನ್ನಲಾಗಿದೆ.
ಪ್ರತಿ ಬಾರಿ ಆ ದೃಶ್ಯದ ಶೂಟಿಂಗ್ ಗೆ ಹೋದಾಗಲೂ ಎಲ್ಲವೂ ಸರಿ ಇರ್ತಾ ಇರಲಿಲ್ಲ. ಬೆಳಕಿನ ಸಮಸ್ಯೆ ಎದುರಾಗ್ತಾ ಇತ್ತು. ಎಲ್ಲವೂ ಪರ್ಫೆಕ್ಟ್ ಎನಿಸುವವರೆಗೂ ಈ ದೃಶ್ಯವನ್ನು ಚಿತ್ರೀಕರಿಸುವುದಿಲ್ಲ ಅಂತಾ ರಮೇಶ್ ಸಿಪ್ಪಿ ಹೇಳಿಬಿಟ್ಟಿದ್ದರು. ಇನ್ನು ‘ಶೋಲೆ’ ಚಿತ್ರದ ‘ಯೇ ದೋಸ್ತಿ’ ಹಾಡನ್ನು 21 ದಿನಗಳ ಕಾಲ ಚಿತ್ರೀಕರಿಸಲಾಗಿತ್ತು. ರೈಲು ದರೋಡೆಯ ದೃಶ್ಯದ ಚಿತ್ರೀಕರಣಕ್ಕೆ 7 ವಾರ ಕಾಲಾವಕಾಶ ತೆಗೆದುಕೊಂಡಿದ್ದರು ನಿರ್ದೇಶಕರು. ಈ ಸಹನೆ ಮತ್ತು ಪರಿಶ್ರಮದ ಫಲವೇ ಅತ್ಯದ್ಬುತ ಚಿತ್ರ ‘ಶೋಲೆ’.