ಬೆಂಗಳೂರು: ಶಾಲಾ ಕಾಲೇಜು ಅಥವಾ ಶೈಕ್ಷಣಿಕ ಸಂಸ್ಥೆಗಳು ಇರುವ ಆವರಣದಲ್ಲಿ ಉಪಹಾರ, ಹೋಟೆಲ್, ಬ್ಯಾಂಕ್ ಇನ್ನಿತರ ಕಟ್ಟಡಗಳು ಇದ್ದರೆ ಅಂತಹ ಕಟ್ಟಡಗಳಿಗೆ ಇನ್ಮುಂದೆ ಆಸ್ತಿ ತೆರಿಗೆಯನ್ನು ಕಟ್ಟುವಂತಿಲ್ಲ. ಅವೆಲ್ಲಾ ಶೈಕ್ಷಣಕ ಸೌಲಭ್ಯಗಳನ್ನು ಒದಗಿಸಲು ಮೂಲ ಸೌಕರ್ಯ ಅತ್ಯಂತ ಅವಶ್ಯಕ ಎಂದು ಕೋರ್ಟ್ ಮಹತ್ವದ ಆದೇಶ ನೀಡಿದೆ. ನವೋದಯ ಶಾಲೆಯ ಪ್ರಕರಣ ಒಂದರಲ್ಲಿ ಮಹತ್ವದ ತೀರ್ಪು ನೀಡಿದೆ.
ರಾಯಚೂರು ನಗರಸಭೆ ಆಯುಕ್ತರು ಇಲ್ಲಿಯ ನವೋದಯ ಎಜುಕೇಷನ್ ಟ್ರಸ್ಟ್ ನಡೆಸುತ್ತಿರುವ ಕಾಲೇಜು ಆವರಣದಲ್ಲಿರು ಉಪಹಾರ ಗೃಹ, ಬ್ಯಾಂಕ್, ಸಿಬ್ಬಂದಿ ವಸತಿ ಗೃಹ ಮತ್ತು ಪೆಟ್ರೋಲ್ ಬಂಕ್ ಕಟ್ಟಡಗಳಿಗೆ ಆಸ್ತಿ ತೆರಿಗೆ ಪಾವತಿಸುವಂತೆ ನಿರ್ದೇಶನ ನೀಡಿದ್ದರು. 2012 ರ ಆಗಸ್ಟ್ 17 ರಂದು ಡಿಮ್ಯಾಂಡ್ ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನೆ ಮಾಡಿ ಕೋರ್ಟ್ ಮೆಟ್ಟಿಲೇರಿತ್ತು ನವೋದಯ ಸಂಸ್ಥೆ.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ, ಮಹತ್ವದ ಆದೇಶ ನೀಡಿದ್ದಾರೆ. ಕರ್ನಾಟಕ ಪೌರಸಭೆಗಳ ಕಾಯ್ದೆ -1964ರ ಸೆಕ್ಷನ್ 04 ಪ್ರಕಾರ ಶೈಕ್ಷಣಿಕ ಉದ್ದೇಶಕ್ಕಾಗಿ ಬಳಸುತ್ತಿರುವ ಯಾವುದೇ ಜಾಗ ಅಥವಾ ಆಸ್ತಿಯು ತೆರಿಗೆ ಪಾವತಿಯಿಂದ ವಿನಾಯ್ತಿ ಪಡೆದಿರುತ್ತದೆ. ಇಂತಹ ಜಾಗಗಳಲ್ಲಿ ಶೈಕ್ಷಣಿಕ ಸಂಸ್ಥೆ ಶೈಕ್ಷಣಿಕ ಸೌಲಭ್ಯಕ್ಕಾಗಿ ಕಟ್ಟಡಗಳನ್ನು ಬಳಸುತ್ತಿದ್ದರೆ, ಅದಕ್ಕೆ ಆಸ್ತಿ ತೆರಿಗೆ ಸೇರಿ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.