alex Certify ಶೇ.3 ರಷ್ಟು ವಿಚ್ಛೇದನಕ್ಕೆ ಟ್ರಾಫಿಕ್ ಕಾರಣ ಎಂದ ಮಾಜಿ ಸಿಎಂ ಪತ್ನಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೇ.3 ರಷ್ಟು ವಿಚ್ಛೇದನಕ್ಕೆ ಟ್ರಾಫಿಕ್ ಕಾರಣ ಎಂದ ಮಾಜಿ ಸಿಎಂ ಪತ್ನಿ….!

ಮುಂಬೈ: ಮಹಾನಗರಿ ಮುಂಬೈನಲ್ಲಿ ಶೇ.3ರಷ್ಟು ವಿಚ್ಛೇದನಕ್ಕೆ ಟ್ರಾಫಿಕ್ ಕಾರಣ ಎಂದು ಅಮೃತಾ ಫಡ್ನವೀಸ್ ಆಡಳಿತಾರೂಢ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ. ಅಮೃತಾ ಫಡ್ನವೀಸ್ ಅವರು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರ ಪತ್ನಿ.

ಮುಂಬೈನ ರಸ್ತೆಗೆ ಕಾಲಿಟ್ಟರೆ ಸಾಕು ಗುಂಡಿಗಳು, ಟ್ರಾಫಿಕ್ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಟ್ರಾಫಿಕ್‌ನಿಂದ ಜನರು ತಮ್ಮ ಕುಟುಂಬಗಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದಲೇ ಮುಂಬೈನಲ್ಲಿ ಶೇ.3ರಷ್ಟು ವಿಚ್ಛೇದನ ಪ್ರಕರಣ ಸಂಭವಿಸುತ್ತಿವೆ. ಹಾಗಾಗಿ ರಾಜ್ಯ ಸರ್ಕಾರ ತನ್ನ ತಪ್ಪುಗಳ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಸಲಹೆ ನೀಡುವುದಾಗಿ ಅಮೃತಾ ಫಡ್ನವೀಸ್ ಹೇಳಿದ್ದಾರೆ.

ಮಹಾರಾಷ್ಟ್ರದ ಮಾಜಿ ಸಿಎಂರ ಪತ್ನಿ ಅಮೃತಾ ಫಡ್ನವೀಸ್ ಎಂವಿಎ ಸರ್ಕಾರವನ್ನು ವಸೂಲಿ ಸರ್ಕಾರ ಎಂದು ಜರೆದಿದ್ದಾರೆ. ಅಲ್ಲದೆ ಅದು ಏಕಸ್ವಾಮ್ಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಇನ್ನು ಅಮೃತಾ ಫಡ್ನವೀಸ್ ಹೇಳಿಕೆಗೆ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಗೇಲಿ ಮಾಡಿದ್ದಾರೆ. ಮುಂಬೈನ ಟ್ರಾಫಿಕ್ ಕಿರಿಕಿರಿಯಿಂದಲೇ ಶೇ.3ರಷ್ಟು ವಿಚ್ಛೇದನ ಸಂಭವಿಸುತ್ತಿವೆ ಎಂಬ ಹೇಳಿಕೆಗೆ ಅಮೃತಾ ಅವರಿಗೆ ತರ್ಕ ಪ್ರಶಸ್ತಿ ನೀಡಬೇಕೆಂದು ಅಪಹಾಸ್ಯ ಮಾಡಿದ್ದಾರೆ. ಬೆಂಗಳೂರಿನಲ್ಲಿ ವಾಸಿಸುವ ಜನರು ದಯವಿಟ್ಟು ಅಮೃತಾ ಅವರ ಹೇಳಿಕೆಯನ್ನು ಕಿವಿಗೆ ಹಾಕಬಾರದು. ನಿಮ್ಮ ಮದುವೆಗೆ ಮಾರಕವಾಗಬಹುದು ಎಂದು ಟ್ವೀಟ್ ಮಾಡಿದ್ದಾರೆ.

ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಕೂಡ ಅಮೃತಾ ಫಡ್ನವಿಸ್ ಅವರ ವಿಚಿತ್ರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಅಮೃತಾ ಫಡ್ನವೀಸ್ ಅವರ ಈ ಆರೋಪವು ಅಚ್ಚರಿ ತಂದಿದೆ. ವಿಚ್ಛೇದನಕ್ಕೆ ಹಲವು ಕಾರಣಗಳಿರಬಹುದು. ಆದರೆ, ಇದನ್ನು ಮೊದಲ ಬಾರಿಗೆ ಕೇಳಿರುವುದಾಗಿ ಪೆಡ್ನೇಕರ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...