ಅನಾವಶ್ಯಕ ಕೂದಲನ್ನು ನಿವಾರಿಸಿ ನಯವಾದ ಚರ್ಮ ಹೊಂದಬೇಕು ಅನ್ನೋದು ಬಹುತೇಕ ಎಲ್ಲರ ಆಸೆ. ಇದಕ್ಕಾಗಿ ಅನೇಕ ಮಹಿಳೆಯರು ಕೈ, ಕಾಲುಗಳ ಮೇಲಿರುವ ಕೂದಲನ್ನು ಶೇವ್ ಮಾಡುತ್ತಾರೆ. ಈ ರೀತಿ ಶೇವ್ ಮಾಡಿದ ಕೆಲವೇ ದಿನಗಳಲ್ಲಿ ಕಾಲುಗಳ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ಈ ಕಪ್ಪು ಚುಕ್ಕೆಗಳು ಸ್ಟ್ರಾಬೆರಿಗಳ ಆಕಾರದಲ್ಲಿರುತ್ತವೆ, ಅದಕ್ಕಾಗಿಯೇ ಅವುಗಳನ್ನು ಸ್ಟ್ರಾಬೆರಿ ಲೆಗ್ಸ್ ಎಂದು ಕರೆಯಲಾಗುತ್ತದೆ. ಹಾರ್ಡ್ ಆಗಿರುವ ಕೂದಲು ಮತ್ತು ಸರಿಯಾಗಿ ಶೇವಿಂಗ್ ಮಾಡದಿರುವುದು ಈ ಸಮಸ್ಯೆಗೆ ಕಾರಣ. ಇದಕ್ಕೆ ಸುಲಭ ಪರಿಹಾರವೂ ಇದೆ.
ಶೇವಿಂಗ್ ಸಂದರ್ಭದಲ್ಲಿ ಮಾಡುವ ತಪ್ಪಿನಿಂದಾಗಿ ಫಾಲಿಕಲ್ಸ್ ಗಾತ್ರವು ದೊಡ್ಡದಾಗುತ್ತದೆ ಎಣ್ಣೆ, ಡೆಡ್ ಸ್ಕಿನ್, ಕೊಳೆ ಮತ್ತು ಸೂಕ್ಷ್ಮಾಣುಗಳು ಅದರಲ್ಲಿ ಸಂಗ್ರಹವಾಗುತ್ತವೆ. ಇದರಿಂದಾಗಿ ಚರ್ಮದ ರಚನೆಯು ಬದಲಾಗಲು ಪ್ರಾರಂಭಿಸುತ್ತದೆ ಮತ್ತು ಅದು ಕಪ್ಪು ಕಪ್ಪು ಚುಕ್ಕೆಗಳಂತೆ ಗೋಚರಿಸುತ್ತದೆ. ಇದಕ್ಕೆ ಮನೆಯಲ್ಲಿಯೇ ನೀವು ಚಿಕಿತ್ಸೆ ಮಾಡಿಕೊಳ್ಳಬಹುದು.
ಜೊಜೊಬಾ ಆಯಿಲ್: ಜೊಜೊಬಾ ಎಣ್ಣೆಯಲ್ಲಿ ಉರಿಯೂತ ನಿವಾರಿಸುವ ಗುಣಲಕ್ಷಣಗಳಿವೆ. ಇದು ಸ್ಕಿನ್ ಪೋರ್ಸ್ ಅನ್ನು ಓಪನ್ ಮಾಡುತ್ತದೆ ಜೊತೆಗೆ ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ. ಈ ಎಣ್ಣೆಯಿಂದ ನಿಮ್ಮ ಕಾಲುಗಳನ್ನು ಮಸಾಜ್ ಮಾಡಿ, ಕೆಲವೇ ದಿನಗಳಲ್ಲಿ ಕಪ್ಪನೆಯ ಗುಳ್ಳೆಗಳು ಮಾಯವಾಗುತ್ತವೆ.
ಅಲೋವೆರಾ ಜೆಲ್: ಅಲೋವೆರಾ ಜೆಲ್ ಅನ್ನು ಅನೇಕ ಸೌಂದರ್ಯ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅಲೋವೆರಾ ಜೆಲ್ ಬಳಸುವುದರಿಂದ ಚರ್ಮ ಹೈಡ್ರೇಟ್ ಆಗಿರುತ್ತದೆ. ಡೆಡ್ ಸ್ಕಿನ್ ಅನ್ನು ಕೂಡ ತೆಗೆದು ಹಾಕುತ್ತದೆ.
ಸ್ಕಿನ್ ಎಕ್ಸ್‌ಪೋಲಿಯೇಟ್: ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡುವುದರಿಂದ ಬ್ಯಾಕ್ಟೀರಿಯಾ ಮತ್ತು ಡೆಡ್ ಸ್ಕಿನ್ ಅನ್ನು ತೆಗೆದು ಹಾಕಬಹುದು. ಈ ಪ್ರಕ್ರಿಯೆಯನ್ನು ಸ್ಕ್ರಬ್ ಎಂದು ಕರೆಯುತ್ತಾರೆ. ತೆಂಗಿನೆಣ್ಣೆಯಲ್ಲಿ ಕಾಫಿ ಪೌಡರ್ ಬೆರೆಸಿ ಸ್ಕ್ರಬ್ ತಯಾರಿಸಿ. ಜೇನುತುಪ್ಪ ಹಾಗೂ ಸಕ್ಕರೆಯ ಸ್ಕ್ರಬ್ ಕೂಡ ಪರಿಣಾಮಕಾರಿಯಾಗಿರುತ್ತದೆ. ಈ ಮನೆಮದ್ದುಗಳನ್ನು ಟ್ರೈ ಮಾಡಿದ್ರೆ ಸ್ಟ್ರಾಬೆರಿ ಲೆಗ್ಸ್‌ನಿಂದ ಮುಕ್ತಿ ಪಡೆಯಬಹುದು.