ಶೇಂಗಾ ಎಣ್ಣೆ ಅಥವಾ ಕಡಲೆಬೀಜ ಎಣ್ಣೆಯನ್ನು ಅಡುಗೆಗೆ ಬಳಸುವುದರಿಂದ ಹಲವು ಲಾಭಗಳಿವೆ. ಈ ಎಣ್ಣೆಯಲ್ಲಿ ಅನ್ ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ ಒಮೆಗಾ 3 ಮತ್ತು 6 ಫ್ಯಾಟಿ ಆಸಿಡ್ ಫೈಬರ್ ಜಾಸ್ತಿ ಇದ್ದು, ಪ್ರೋಟಿನ್, ಕ್ಯಾಲ್ಸಿಯಂ, ಪೊಟ್ಯಾಷಿಯಂ, ಸೋಡಿಯಂ ಹೇರಳವಾಗಿದೆ.
ಶೇಂಗಾ ಎಣ್ಣೆ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುತ್ತದೆ. ಹೃದಯಕ್ಕೆ ಉತ್ತಮವಾದುದು. ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೈ ಬಿಪಿ ಇದ್ದರೆ ಅದನ್ನು ಕಂಟ್ರೋಲ್ ಮಾಡುತ್ತದೆ. ಡಯಾಬಿಟೀಸ್ ರೋಗಿಗಳಿಗೂ ಶೇಂಗಾ ಎಣ್ಣೆ ಒಳ್ಳೆಯದು. ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಮೆದುಳು ಚುರುಕಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ನೆನಪಿನ ಶಕ್ತಿ ಹೆಚ್ಚಿಸುತ್ತದೆ.
ಶೇಂಗಾ ಎಣ್ಣೆಯನ್ನು ಮುಖಕ್ಕೆ ಮಸಾಜ್ ಮಾಡಿ, ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಇದರಿಂದ ಒಣ ಚರ್ಮದ ಸಮಸ್ಯೆ ದೂರ ಆಗುತ್ತದೆ. ನಿಮ್ಮ ಕೂದಲು ಚೆನ್ನಾಗಿ ಬೆಳೆಯುತ್ತದೆ. ಇದನ್ನು ಒಬ್ಬರಿಗೆ ದಿನಕ್ಕೆ 4 ರಿಂದ 5 ಚಮಚದಷ್ಟು ಮಾತ್ರ ಬಳಸಬೇಕು. ವಾರಕ್ಕೆ ಒಮ್ಮೆ ಡೀಪ್ ಫ್ರೈ ಮಾಡಿರುವ ಆಹಾರ ತಿನ್ನಬಹುದು.