ಶೃಂಗೇರಿ ಶಾರದಾಂಬಾ ದೇವಸ್ಥಾನದೊಳಗೆ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಿದೆ. ಈ ಹಾವು ದೇವಸ್ಥಾನದ ಮುಂಭಾಗದಲ್ಲಿ ಕಾಣಿಸಿಕೊಂಡಿದೆ. ಅಲ್ಲಿದ್ದ ಜನರನ್ನು ಕಂಡು ಭಯದಲ್ಲಿ ಬುಸುಗುಟ್ಟಿತ್ತಿರುವುದನ್ನು ಕಂಡ ದೇವಸ್ಥಾನದ ಸಿಬ್ಬಂದಿ ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಧಾವಿಸಿದ ಉರಗ ತಜ್ಞರು ದೊಡ್ಡ ಗಾತ್ರದ ಈ ಕಾಳಿಂಗ ಸರ್ಪವನ್ನು ಹಿಡಿದು ಕಾಡಿನೊಳಗೆ ಬಿಟ್ಟಿದ್ದಾರೆ. ಈ ಕಾಳಿಂಗ ಸರ್ಪ ಸುಮಾರು 10 ಅಡಿ ಉದ್ದವಿತ್ತು ಎನ್ನಲಾಗಿದೆ.
ಶಾರದಾಂಬೆಯ ದೇವಸ್ಥಾನದ ಹತ್ತಿರ ಕಾಳಿಂಗ ಸರ್ಪವನ್ನು ಕಂಡ ಹಲವು ಭಕ್ತರು, ದೇವಿಯ ಸ್ವರೂಪವೇ ಇದು. ಜನರಿಗೆ ಆಶೀರ್ವಾದ ಮಾಡುವ ನಿಟ್ಟಿನಲ್ಲಿ ಆಗಮಿಸಿದೆ ಎಂದು ಕೈ ಮುಗಿದಿದ್ದಾರೆ. ಆದರೆ, ಸ್ಥಳದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.