ಪ್ಯಾಕಿಂಗ್ ಮಾಡೋದು ಒಂದು ಕಲೆ. ಅದರಲ್ಲೂ ಪ್ರವಾಸಕ್ಕೆ ಹೊರಡಬೇಕಾದರೆ ಸರಿಯಾಗಿ ಪ್ಯಾಕಿಂಗ್ ಮಾಡಿಲ್ಲವಾದರೆ ಲಗ್ಗೇಜ್ ಜಾಸ್ತಿಯಾಗೋದ್ರಲ್ಲಿ ಡೌಟಿಲ್ಲ. ಅದ್ರಲ್ಲೂ ಮುಖ್ಯವಾಗಿ ಚಪ್ಪಲಿಗಳನ್ನು ಅಥವಾ ಶೂಗಳನ್ನು ಪ್ಯಾಕಿಂಗ್ ಮಾಡೋದ್ರಲ್ಲಿ ನೈಪುಣ್ಯತೆಯೇ ಬೇಕು. ನಿಮಗಾಗಿ ಸರಳವಾಗಿರೋ ಶೂ ಪ್ಯಾಕಿಂಗ್ ಟಿಪ್ಸ್ ಗಳನ್ನು ನಾವು ನೀಡ್ತೀವಿ.
ಹೊರಡುವಾಗ ದೊಡ್ಡದಾಗಿರೋ ಅಥವಾ ಭಾರವಾಗಿರೋ ಶೂ ಧರಿಸಿ. ಇದರಿಂದ ಲಗ್ಗೇಜ್ ನಲ್ಲಿ ಬಹಳಷ್ಟು ಜಾಗ ಉಳಿಯುತ್ತೆ.
ನಿಮ್ಮ ಬಹುತೇಕ ಡ್ರೆಸ್ ಗಳಿಗೆ ಮ್ಯಾಚ್ ಆಗುವಂಥ ಶೂಗಳನ್ನೇ ತೆಗೆದುಕೊಂಡು ಹೋಗಿ.
ಬಳಸಿದ ಶೂಗಳನ್ನು ನಿಮ್ಮ ಬ್ಯಾಗ್ ಹೊರಗೆ ಲೇಸ್ ಜೊತೆ ಕಟ್ಟಿ. ಇದರಿಂದ ಬ್ಯಾಗ್ ಒಳಗೆ ವಾಸನೆ ಹರಡುವುದಿಲ್ಲ.
ಪ್ಯಾಕಿಂಗ್ ಮಾಡುವಾಗ ಪುಟ್ಟ ಪುಟ್ಟ ವಸ್ತುಗಳನ್ನು ಶೂ ಒಳಗೆ ಇರಿಸಿ. ಇದರಿಂದ ಕಡಿಮೆ ಜಾಗದಲ್ಲಿ ಜಾಸ್ತಿ ವಸ್ತುಗಳನ್ನು ಇರಿಸಬಹುದು.
ಹವಾಮಾನಕ್ಕೆ ಅನುಗುಣವಾಗಿಯೇ ಶೂಗಳನ್ನು ತೆಗೆದುಕೊಳ್ಳಿ.
ಸಾಮಾನ್ಯವಾಗಿ ಬ್ರೌನ್ ಅಥವಾ ಕಪ್ಪು ಬಣ್ಣದ ಶೂಗಳನ್ನು ಆಯ್ಕೆ ಮಾಡಿಕೊಳ್ಳಿ. ಧೂಳು ಅಥವಾ ಕಲೆಗಳಾದಲ್ಲಿ ಕಾಣುವುದಿಲ್ಲ.
ಹೋಗುವಾಗ ಒಂದೆರಡು ಪ್ಲಾಸ್ಟಿಕ್ ಬ್ಯಾಗ್ ಗಳನ್ನು ತೆಗೆದುಕೊಂಡು ಹೋಗಿ. ಬಳಸಿದ ಬಳಿಕ ಶೂಗಳನ್ನು ಅದರಲ್ಲೇ ಇಡಿ. ಇದರಿಂದ ನಿಮ್ಮ ಬ್ಯಾಗ್ ವಾಸನೆಯಾಗುವುದಿಲ್ಲ.