ಏ. ೨೩ರಂದು ಅಕ್ಷಯ ತೃತೀಯ. ಶಾಸ್ತ್ರದಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ಈ ದಿನ ಮಾಡಿದ ವೃತ ಹಾಗೂ ದಾನ ಬಹಳ ಮಂಗಳಕರವೆಂದು ಭಾವಿಸಲಾಗಿದೆ. ತಾಯಿ ಲಕ್ಷ್ಮಿ ಈ ದಿನ ಕುಬೇರನಿಗೆ ಧನ-ಸಂಪತ್ತು ನೀಡಿದ್ದಳಂತೆ.
ಈ ಬಾರಿ ಭಾನುವಾರ ಅಕ್ಷಯ ತೃತೀಯ ಬಂದಿದೆ. ಈ ದಿನ ಬೆಳಿಗ್ಗೆ ಎದ್ದ ತಕ್ಷಣ ಮಾಡುವ ಕೆಲಸಗಳು ಶುಭ ಫಲವನ್ನು ನೀಡುತ್ತವೆ ಎಂದು ನಂಬಲಾಗಿದೆ. ಬೆಳಿಗ್ಗೆ ಎದ್ದ ತಕ್ಷಣ ಎರಡೂ ಕೈಗಳನ್ನು ನೋಡಿಕೊಂಡು ‘ಕರಾಗ್ರೆ ವಸತೇ ಲಕ್ಷ್ಮಿ’ ಮಂತ್ರವನ್ನು ಪಠಿಸಿ.
ಎರಡನೇಯದಾಗಿ ಸ್ನಾನ ಮಾಡುವ ವೇಳೆ ಪವಿತ್ರ ನದಿಗಳ, ತೀರ್ಥ ಕ್ಷೇತ್ರಗಳ ಹೆಸರನ್ನು ಹೇಳಿ. ಹೀಗೆ ಮಾಡಿದ್ರೆ ಮನೆಯಲ್ಲಿಯೇ ತೀರ್ಥಸ್ನಾನ ಮಾಡಿದ ಫಲ ಲಭಿಸುತ್ತದೆ.
ಸ್ನಾನ ಮಾಡಿ ಶುದ್ಧ ಬಟ್ಟೆ ಧರಿಸಿ ಸೂರ್ಯನಿಗೆ ಜಲವನ್ನು ಅರ್ಪಿಸಿ. ಜಲವನ್ನು ತಾಮ್ರದ ಪಾತ್ರೆಯಲ್ಲಿ ಅರ್ಪಿಸಬೇಕು.
ಅಕ್ಷಯ ತೃತೀಯದಂದು ದಾನ ಮಾಡಿದ್ರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಗೋಧಿ, ಬಾರ್ಲಿ, ಮೊಸರು, ಅಕ್ಕಿ, ಕಿಚಡಿ, ಕಬ್ಬಿನ ಹಾಲು, ಹಾಲಿನಿಂದ ಮಾಡಿದ ಸಿಹಿ, ಚಿನ್ನ, ಬಟ್ಟೆ, ನೀರಿನ ಕಳಶವನ್ನು ದಾನ ಮಾಡಬೇಕು.
ಅಕ್ಷಯ ತೃತೀಯದಂದು ಸಂಜೆ ಶಿವನ ದೇವಸ್ಥಾನಕ್ಕೆ ಹೋಗಿ ಶಿವನಿಗೆ ಜಲವನ್ನು ಅರ್ಪಿಸಿ. ಜಲ ಅರ್ಪಿಸಿದ ನಂತ್ರ ‘ಓಂ ನಮಃ ಶಿವಾಯ’ ಮಂತ್ರವನ್ನು 108 ಬಾರಿ ಪಠಿಸಿ.