ಮನೆ ನಿರ್ಮಾಣ ಮಾಡುವ ವೇಳೆ ಪ್ರತಿಯೊಂದು ವಿಷಯದ ಬಗ್ಗೆಯೂ ಗಮನ ನೀಡಬೇಕಾಗುತ್ತದೆ. ಮುಖ್ಯ ಬಾಗಿಲು, ಕೋಣೆ, ಅಡುಗೆ ಮನೆ ಇದೆಲ್ಲದರ ಜೊತೆಗೆ ಕೊಳಕು ನೀರು ಹೋಗುವ ದಿಕ್ಕು ಕೂಡ ಮಹತ್ವ ಪಡೆಯುತ್ತದೆ. ಸ್ನಾನ ಗೃಹ, ಶೌಚಾಲಯ, ಬಟ್ಟೆ ತೊಳೆದ ನೀರು, ಪಾತ್ರೆ ತೊಳೆದ ನೀರು ಹೀಗೆ ಎಲ್ಲ ಕೊಳಕು ನೀರು ಮನೆಯಿಂದ ಹೊರಗೆ ಹೋಗಲೇಬೇಕು. ಆದ್ರೆ ನೀರು ಹೋಗುವ ದಿಕ್ಕು ಶುಭ-ಅಶುಭ ಫಲ ನೀಡುತ್ತದೆ.
ತ್ಯಾಜ್ಯ ನೀರು ಈಶಾನ್ಯ ಭಾಗದಿಂದ ಹೊರಗೆ ಹೋಗುವಂತಿದ್ದರೆ ಆ ಮನೆಯಲ್ಲಿ ಸಂತಾನ ವೃದ್ಧಿಯಾಗುತ್ತದೆ.
ಯಾರ ಮನೆಯಲ್ಲಿ ಪೂರ್ವದಿಂದ ತ್ಯಾಜ್ಯ ನೀರು ಹೊರಗೆ ಹೋಗುತ್ತದೆಯೋ ಆ ಮನೆ ಪುರುಷರು ಆರೋಗ್ಯವಾಗಿರ್ತಾರೆ.
ಮನೆಯ ತ್ಯಾಜ್ಯ ನೀರು ಆಗ್ನೇಯ ದಿಕ್ಕಿನಿಂದ ಹೋದ್ರೆ ಅದು ಅಶುಭ. ಪುತ್ರ ಸಂತಾನಕ್ಕೆ ಇದು ಅಶುಭವೆಂದು ಪರಿಗಣಿಸಲಾಗಿದೆ.
ದಕ್ಷಿಣ ದಿಕ್ಕಿನಿಂದ ಕೊಳಕು ನೀರು ಮನೆಯಿಂದ ಹೊರಗೆ ಹೋಗ್ತಾ ಇದ್ದರೆ ಆ ಮನೆಯ ಸ್ತ್ರೀಯರಿಗೆ ನಷ್ಟ.
ತ್ಯಾಜ್ಯ ನೀರು ವಾಯುವ್ಯ ದಿಕ್ಕಿನಿಂದ ಹೊರಗೆ ಹೋಗ್ತಾ ಇದ್ದರೆ ಶತ್ರುಗಳು ಹೆಚ್ಚಾಗ್ತಾರೆ. ಶತ್ರುಗಳ ಭಯ ಕಾಡುತ್ತದೆ.
ಉತ್ತರ ದಿಕ್ಕಿನಿಂದ ಕೊಳಕು ನೀರು ಹೊರಗೆ ಹೋಗ್ತಾ ಇದ್ದಲ್ಲಿ ಆ ಮನೆಯ ಗೌರವ ಹೆಚ್ಚಾಗುತ್ತದೆ. ಶುಭ ಫಲಗಳು ದೊರಕುತ್ತವೆ.