ದೆಹಲಿಯ ವಾತಾವರಣ ನೋಡ್ತಿದ್ರೆ ದೆಹಲಿ ಸಹವಾಸ ಬೇಡ ಎನ್ನುವಂತಿದೆ. ದೆಹಲಿ ವಾತಾವರಣ ವಿಷವಾಗಿದೆ. ಉಸಿರಾಡಿದ್ರೆ ಸಾವು ನಿಶ್ಚಿತ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಶುದ್ಧ ಗಾಳಿಗೆ ಹುಡುಕಾಟ ನಡೆಸುವಂತಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಜನರು ಏರ್ ಪ್ಯೂರಿಫಾಯರ್, ಏರ್ ಮಾನಿಟರ್, ಇಂಡೋರ್ ಪ್ಲಾಂಟ್ಸ್ಗಳನ್ನ ಖರೀದಿ ಮಾಡುತ್ತಿದ್ದಾರೆ.
ಆದರೆ ಸಾವಿರಾರು ರೂಪಾಯಿ ಕೊಟ್ಟು ಶುದ್ಧ ಗಾಳಿ ಪಡೆಯುವ ಬದಲು ಈ ಸುಲಭ ವಿಧಾನ ಅನುಸರಿಸಿ. 200 ರೂಪಾಯಿಯಿಂದ 300 ರೂಪಾಯಿಯೊಳಗೆ ನಿಮ್ಮ ಕೋಣೆಗೆ ಶುದ್ಧ ಗಾಳಿ ಬರೋದ್ರಲ್ಲಿ ಅನುಮಾನವಿಲ್ಲ.
ಇದಕ್ಕೆ ನೀವು ಮಾಡಬೇಕಾಗಿದ್ದು ಇಷ್ಟೆ, ನಿಮ್ಮ ಮನೆಯ ಕೋಣೆಗಳಲ್ಲಿ ಚಿಕ್ಕ-ಚಿಕ್ಕ ಗಿಡಗಳನ್ನ ತಂದಿಟ್ಟುಕೊಳ್ಳಿ. ಮನೆಯಲ್ಲಿ ಖಾಲಿ ಇರುವ ಮಿನರಲ್ ವಾಟರ್ ಬಾಟಲಿಗಳನ್ನ ಈ ಚಿಕ್ಕ ಚಿಕ್ಕ ಗಿಡಗಳನ್ನ ಇಡಲು ಉಪಯೋಗಿಸಿಕೊಳ್ಳಿ. ಅದರಲ್ಲೂ ಮನಿಪ್ಲಾಂಟ್ ಗಿಡ ತುಂಬಾನೇ ಒಳ್ಳೆಯದು. ಮಣ್ಣು, ಗೊಬ್ಬರದ ಅವಶ್ಯಕತೆ ಈ ಗಿಡಕ್ಕೆ ಇರುವುದಿಲ್ಲ.
ಶುದ್ಧ ಗಾಳಿ ಜೊತೆಗೆ ಮನೆಯ ಅಂದವನ್ನು ಗಿಡಗಳು ಹೆಚ್ಚಿಸುತ್ತವೆ. ಇದೇ ಒಂದು ಉದ್ದೇಶವನ್ನಿಟ್ಟುಕೊಂಡು ದೆಹಲಿಯ ಪಹಾರಪುರ ಬ್ಯುಸಿನೆಸ್ ಸೆಂಟರ್ ಗ್ರೀನ್ ಬಿಲ್ಡಿಂಗ್ ಆಗಿ ಪರಿವರ್ತನೆಗೊಂಡಿದೆ.
ದೆಹಲಿಯ ಪಹರಾಪುರ್ ಬ್ಯುಸಿನೆಸ್ ಸೆಂಟರ್ ಭಾರತದಲ್ಲಿರೋ ಏಕೈಕ ಗ್ರೀನ್ ಬಿಲ್ಡಿಂಗ್ ಎಂದೇ ಫೇಮಸ್ ಆಗಿದೆ. ಈ ಕಟ್ಟಡದಲ್ಲಿ ಸುಮಾರು 7 ಸಾವಿರಕ್ಕಿಂತಲೂ ಹೆಚ್ಚಿನ ಪ್ಲಾಂಟ್ ಗಳಿವೆ. ನಮ್ಮ ಸುತ್ತಮುತ್ತಲಿನ ವಾತಾವರಣ ಮಾಲಿನ್ಯವಾಗ್ತಿದೆ. ಸಮಯ ಮೀರಿದ ಮೇಲೆ ಪಶ್ಚಾತಾಪ ಪಡುವ ಬದಲು ಈಗ್ಲೇ ಎಚ್ಚೆತ್ತುಕೊಂಡರೆ ಒಳ್ಳೆಯದು.