ಪೂಜೆಗೆ ಅನೇಕ ಹೂಗಳನ್ನು ಬಳಸ್ತಾರೆ. ಅದ್ರಲ್ಲೂ ಗುಲಾಬಿ ಹೂ ಅತ್ಯಂತ ಶ್ರೇಷ್ಠವಾದದ್ದು. ಗುಲಾಬಿ ಹೂವನ್ನು ಎಲ್ಲ ದೇವಾನುದೇವತೆಗಳಿಗೆ ಅರ್ಪಿಸಲಾಗುತ್ತದೆ.ಜ್ಯೋತಿಷ್ಯರ ಪ್ರಕಾರ ಗುಲಾಬಿ ಹೂವಿನಲ್ಲಿ ಜಾತಕ ದೋಷ ನಿವಾರಣೆ ಮಾಡುವ ಹಾಗೂ ದೌರ್ಭಾಗ್ಯ ದೂರ ಮಾಡುವ ಶಕ್ತಿಯಿದೆ.
ಪ್ರತಿ ಶುಕ್ರವಾರ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ 11 ಗುಲಾಬಿ ಹೂವನ್ನು ದೇವರಿಗೆ ಅರ್ಪಿಸಬೇಕು. ಓಂ ಮಹಾಲಕ್ಷ್ಮಿಯೇ ನಮಃ ಮಂತ್ರವನ್ನು ಜಪಿಸಬೇಕು.
ನಕಾರಾತ್ಮಕತೆ ದೂರ ಮಾಡಲು ಮನೆಯಲ್ಲಿ ಸಂಜೆ ಗುಲಾಬಿ ಮೇಲೆ ಕರ್ಪೂರವನ್ನು ಹಚ್ಚಿ. ಸುಖ-ಸಮೃದ್ಧಿಗಾಗಿ ಶುಕ್ರವಾರ ಕೆಂಪು ಚಂದನ, ಕೆಂಪು ಕುಂಕುಮವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ. ಇದನ್ನು ಮಂಗಳವಾರ ಹನುಮಾನ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಪೂಜೆ ಮಾಡಿ. ನಂತ್ರ ಕಪಾಟಿನಲ್ಲಿ ಭದ್ರವಾಗಿಡಿ.
ಮಂಗಳ ಗ್ರಹದ ದೋಷ ನಿವಾರಣೆಗೆ ಮಂಗಳವಾರ ಕೆಂಪು ಗುಲಾಬಿಯನ್ನು ಶಿವಲಿಂಗಕ್ಕೆ ಅರ್ಪಿಸಿ.
ಎಲೆ ಮೇಲೆ ಗುಲಾಬಿಯ ಏಳು ದಳಗಳನ್ನು ಇಟ್ಟು ಅದನ್ನು ದುರ್ಗಾ ದೇವಿ ಚರಣಕ್ಕೆ ಅರ್ಪಿಸಿ. ಹೀಗೆ ಮಾಡಿದ್ರೆ ಜಾತಕದ ದೋಷ ನಿವಾರಣೆಯಾಗುತ್ತದೆ.
ಬೇಡಿಕೆ ಈಡೇರಿಕೆಗೆ ಮಂಗಳವಾರ ಹಾಗೂ ಶನಿವಾರ 11 ಗುಲಾಬಿ ಹೂವನ್ನು ಹನುಮಂತನಿಗೆ ಅರ್ಪಿಸಿ. ಓಂ ರಾಮನಾಥಾಯ ನಮಃ ಮಂತ್ರವನ್ನು 108 ಬಾರಿ ಪಠಿಸಿ.