ಶುಕ್ರವಾರದ ದಿನ ತಾಯಿ ಲಕ್ಷ್ಮಿಗೆ ಅರ್ಪಿಸಲಾಗಿದೆ. ಸಂಪತ್ತು, ಗೌರವ, ಯಶಸ್ಸು, ಆರೋಗ್ಯ ಬಯಸುವವರು ಶುಕ್ರವಾರದ ದಿನ ತಾಯಿಯ ಆರಾಧನೆ ಮಾಡಬೇಕು. ಶುಕ್ರವಾರ ಮಾಡುವ ಸಣ್ಣಪುಟ್ಟ ಕೆಲಸಗಳು ತಾಯಿಯನ್ನು ಒಲಿಸಿಕೊಳ್ಳಲು ನೆರವಾಗುತ್ತದೆ.
ಶುಕ್ರವಾರದ ದಿನ ತುಪ್ಪವನ್ನು ದಾನ ನೀಡಬೇಕು.ಇದ್ರಿಂದ ಜೀವನದಲ್ಲಿ ಸಂತೋಷ ನೆಲೆಸುತ್ತದೆ. ಆರ್ಥಿಕ ವೃದ್ಧಿಯಾಗುತ್ತದೆ.
ಅಪಘಾತದ ಭಯವಿರುವವರು ತಾಮ್ರದ ಪಾತ್ರೆಯಲ್ಲಿ ಬೆಲ್ಲವನ್ನಿಟ್ಟು, ತಾಯಿ ಲಕ್ಷ್ಮಿ ದೇವಸ್ಥಾನಕ್ಕೆ ಅರ್ಪಿಸಿ. ನಂತ್ರ ದೇವಸ್ಥಾನದಲ್ಲಿ ಕುಳಿತು ತಾಯಿಯ ಪ್ರಾರ್ಥನೆ ಮಾಡಿ. ಇದು ಆಕಸ್ಮಿಕ ದುರ್ಘಟನೆಯಿಂದ ನಿಮ್ಮನ್ನು ರಕ್ಷಿಸುತ್ತದೆ.
ಜಾತಕದಲ್ಲಿ ಸೂರ್ಯ ದುರ್ಬಲನಾಗಿದ್ದರೆ ಶುಕ್ರವಾರ ಬೆಲ್ಲ ತಿಂದು ನೀರು ಕುಡಿದ ಮೇಲೆ ಕೆಲಸ ಶುರು ಮಾಡಿ.
ಶುಕ್ರವಾರ ಬೆಲ್ಲವನ್ನು ದಾನ ಮಾಡುವುದ್ರಿಂದ ಪಿತೃಗಳು ಖುಷಿಯಾಗ್ತಾರೆ. ಯಶಸ್ಸು ಗಳಿಸುವಂತೆ ಹರಸುತ್ತಾರೆ.
ಶುಕ್ರವಾರ ಬ್ರಾಹ್ಮಣರು ಹಾಗೂ ಬಡವರಿಗೆ ಧಾನ್ಯಗಳಲ್ಲಿ ಬೆಲ್ಲ ಸೇರಿಸಿ ನೀಡಿ. ಇದು ಜೀವನದಲ್ಲಿ ಬರುವ ಎಲ್ಲ ಕಷ್ಟವನ್ನು ಬಗೆಹರಿಸುತ್ತದೆ.
ಧನ ಪ್ರಾಪ್ತಿಗಾಗಿ ಶುಕ್ರವಾರದ ದಿನ ವೃತ ಮಾಡಿ. ದಕ್ಷಿಣ ಮುಖದ ಶಂಖದಲ್ಲಿ ನೀರನ್ನು ಹಾಕಿ ಭಗವಂತನಿಗೆ ಅರ್ಪಿಸಿ. ಇದನ್ನು ಮೂರು ಶುಕ್ರವಾರಗಳ ಕಾಲ ಮಾಡಿ.