ಪೇಪರ್ ಬ್ಯಾಗ್ ಅಥವಾ ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿಟ್ಟು, ಸ್ವಲ್ಪವೂ ಗಾಳಿಯಾಡದಂತೆ ನೋಡಿಕೊಂಡು ಫ್ರಿಡ್ಜ್ ನಲ್ಲಿಡಿ.
ಅಸಿಡಿಕ್ ದ್ರಾವಣ
ಹಸಿ ಶುಂಠಿಯನ್ನು ನಿಂಬೆ ಅಥವಾ ವಿನೇಗರ್ ದ್ರಾವಣದಲ್ಲಿ ಬೆರೆಸಿ ಒಂದು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ತುಂಬಾ ಸಮಯದವರೆಗೆ ಫ್ರೆಶ್ ಆಗಿ ಇರುತ್ತದೆ. ಆದರೆ ಬಳಸುವ ಮುನ್ನ ಚೆನ್ನಾಗಿ ತೊಳೆಯುವುದನ್ನು ಮರೆಯಬೇಡಿ.
ಕತ್ತರಿಸಿಕೊಳ‍್ಳಿ
ಶುಂಠಿಯ ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿಕೊಂಡು ಫ್ರೀಜರ್ ನಲ್ಲಿಡಿ. ಸ್ವಲ್ಪ ಹೊತ್ತಿನ ಬಳಿಕ ಒಂದು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ಫ್ರೆಶ್ ನೆಸ್ ಉಳಿಯುವುದಲ್ಲದೆ, ವಾಸನೆಯೂ ಹೋಗದು.