ಶುಂಠಿ ಆರೋಗ್ಯಕ್ಕೆ ಎಷ್ಟು ಉತ್ತಮವೋ, ಹೆಚ್ಚಾಗಿ ಬಳಸುವುದರಿಂದ ಆರೋಗ್ಯಕ್ಕೆ ಹಾನಿಯೂ ಆಗುತ್ತದೆ.
ವ್ಯಕ್ತಿಯ ದೇಹವು ಉಷ್ಣತೆಯಿಂದ ಕೂಡಿದ್ದರೆ ಮತ್ತು ವಿಪರೀತ ಬೆವರುತ್ತಿದ್ದರೆ ಶುಂಠಿ ಸೇವಿಸಬಾರದು. ಅದರಲ್ಲೂ ಬೇಸಿಗೆ ಕಾಲದಲ್ಲಿ ಶುಂಠಿಯನ್ನು ಸೇವಿಸಿದರೆ ದೇಹದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಮೂಗಿನಲ್ಲಿ ರಕ್ತಸ್ರಾವ ಆಗುತ್ತದೆ. ಹಾಗಾಗಿ ಶುಂಠಿಯನ್ನು ದೂರ ಇಡುವುದು ಒಳ್ಳೆಯದು.
ಶುಂಠಿ ಚಹಾವನ್ನು ಸೇವನೆ ಮಾಡುತ್ತಿದ್ದರೆ ಅದನ್ನು ಮಿತವಾಗಿ ಬಳಸಬೇಕು. ಮಿತಿ ಮೀರಿ ಬಳಸಬಾರದು. ಶುಂಠಿ ಟೀ ಅನ್ನು ಅಧಿಕ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಜೀರ್ಣಾಂಗದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಜಠರದಲ್ಲಿ ಸಮಸ್ಯೆಗಳು ಕಾಣುತ್ತವೆ. ಹಾಗೂ ಎದೆ ಉರಿಯಂತಹ ಸಮಸ್ಯೆಗಳು ಉಂಟಾಗುತ್ತವೆ. ಬಾಯಿ ತುರಿಕೆ ಕೂಡ ಕಂಡು ಬರುತ್ತದೆ. ಇದರಿಂದ ಅಸಿಡಿಟಿ ಹೆಚ್ಚಾಗುತ್ತದೆ.