alex Certify ಶುಂಠಿ ಚಹಾ, ಬ್ಲಾಕ್ ಟೀ ಗೊತ್ತು…… ಹಣ್ಣಿನ ಚಹಾ ಸೇವಿಸಿದ್ದೀರಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುಂಠಿ ಚಹಾ, ಬ್ಲಾಕ್ ಟೀ ಗೊತ್ತು…… ಹಣ್ಣಿನ ಚಹಾ ಸೇವಿಸಿದ್ದೀರಾ..?

ನೀವು ಚಹಾ ಪ್ರಿಯರೇ..? ಹಾಗಿದ್ದರೆ ನೀವು ಯಾವೆಲ್ಲಾ ರೀತಿಯ ಚಹಾ ಸೇವಿಸಲು ಇಷ್ಟಪಡುತ್ತೀರಾ..? ಶುಂಠಿ ಚಹಾ, ಏಲಕ್ಕಿ, ಲವಂಗ, ತುಳಸಿ ಎಲೆ ಚಹಾ, ಅಥವಾ ಬ್ಲಾಕ್ ಟೀ ಮುಂತಾದವನ್ನು ನೀವು ಇಷ್ಟಪಡಬಹುದು. ಆದ್ರೆ, ಇದೀಗ ವೈರಲ್ ಆಗಿರೋ ವಿಡಿಯೋದಲ್ಲಿ ಚಹಾ ಮಾಡೋ ರೀತಿ ನೋಡಿದ್ರೆ, ಟೀ ಪ್ರಿಯರಿಗೆ ವಾಕರಿಕೆ ಬರೋದು ಖಚಿತ..!

ಹೌದು, ವೈರಲ್ ಆಗಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ಹಣ್ಣಿನ ಚಹಾ ತಯಾರಿಸಿದ್ದಾನೆ. ಅಯ್ಯೋ, ಇದೇನಿದು ಹಣ್ಣಿನ ಚಹಾವೇ ಅಂತಾ ಆಶ್ಚರ್ಯಪಡುತ್ತಿದ್ದೀರಾ, ಆದ್ರೂ ಇದು ಸತ್ಯ. ವೈರಲ್ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಆಹಾರ ಬ್ಲಾಗರ್ ಅಮರ್ ಸಿರೋಹಿ ಅವರು ಪೋಸ್ಟ್ ಮಾಡಿದ್ದಾರೆ.

ಬೀದಿ ಬದಿಯ ವ್ಯಾಪಾರಿ ಹಣ್ಣಿನ ಚಹಾ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ಸೂರತ್ ಮೂಲದ ವ್ಯಾಪಾರಿ ಈ ವಿಶಿಷ್ಟ ಚಹಾವನ್ನು ತಯಾರಿಸುತ್ತಾರೆ. ಚಹಾದ ಪಾತ್ರೆಗೆ ನೀರು ಹಾಗೂ ಹಾಲನ್ನು ಮಿಕ್ಸ್ ಮಾಡಿದ ಒಲೆ ಮೇಲಿಟ್ಟ ಅವರು ಅದಕ್ಕೆ ಬಾಳೆಹಣ್ಣು ಮತ್ತು ಚಹಾ ಎಲೆಗಳನ್ನು ಸೇರಿಸಿದ್ದಾರೆ. ನಂತರ ಚಿಕ್ಕು ಹಾಗೂ ಸೇಬಿನ ತುಂಡುಗಳು, ಸ್ವಲ್ಪ ಶುಂಠಿಯನ್ನು ಕೂಡ ಹಾಕಿ, ಚಹಾವನ್ನು ಚೆನ್ನಾಗಿ ಕುದಿಸಿದ್ದಾರೆ.

ಹಣ್ಣಿನ ಚಹಾವು ಚೆನ್ನಾಗಿ ಕುದಿದ ನಂತರ ಅದನ್ನು ಕೆಟಲ್ ನಲ್ಲಿ ಸೋಸಿದ್ರೆ ತಾಜಾ ಹಣ್ಣಿನ ಟೀ ಸವಿಯಲು ಸಿದ್ಧ. ವಿಡಿಯೋವನ್ನು ಆಹಾರ ಬ್ಲಾಗರ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸೂರತ್‌ನ ಹಣ್ಣಿನ ಚಹಾ ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ಈ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ 9 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಆದರೆ ಇದರಿಂದ ನೆಟ್ಟಿಗರು ಪ್ರಭಾವಿತರಾದಂತೆ ಕಂಡುಬಂದಿಲ್ಲ. ಇದೇನು ಚಹಾ ಮಾಡುತ್ತಿದ್ದಾರೆಯೋ ಅಥವಾ ಹಣ್ಣಿನ ಪಾನಕ ಮಾಡಿದ್ದಾರೋ ಎಂದು ಬಳಕೆದಾರರೊಬ್ಬರು ಸಿಡಿಮಿಡಿಗೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...