ಮಗಳು ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಇಂದ್ರಾಣಿ ಮುಖರ್ಜಿಗೆ ಜೈಲಿನಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ.
ಇಂದ್ರಾಣಿಗೆ ಬುಧವಾರ ಸುಪ್ರಿಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆರು ವರ್ಷಗಳ ನಂತರ ತನ್ನ ಪುತ್ರಿ ಶೀನಾ ಬೋರಾ ಹತ್ಯೆಯ ಆರೋಪಿ ಇಂದ್ರಾಣಿ ಮುಖರ್ಜಿ ಬೈಕುಲ್ಲಾ ಜೈಲಿನಿಂದ ಹೊರನಡೆದಿದ್ದಾರೆ.
ಜೈಲಿನಿಂದ ಹೊರಬರುತ್ತಿರುವಾಗ ಬಿಳಿ ಬಟ್ಟೆ ತೊಟ್ಟಿರುವ ಇಂದ್ರಾಣಿ ಮುಖರ್ಜಿ, ತಾನು ಉತ್ತಮವಾಗಿದ್ದೇನೆ ಎಂದು ತಿಳಿಸಿದ್ದಾರೆ. ಅಲ್ಲದೆ ತಾನು ಇನ್ನೂ ಯಾವುದೇ ಯೋಜನೆಯನ್ನು ಮಾಡಿಲ್ಲ ಎಂದು ಹೇಳಿದ್ದಾರೆ. ಜೈಲಿನಿಂದ ತಾನು ತುಂಬಾ ಪಾಠ ಕಲಿತಿದ್ದಾಗಿ ಅವರು ತಿಳಿಸಿದ್ದಾರೆ.
ಜೈಲಿನಿಂದ ಹೊರಬರುತ್ತಿದ್ದಂತೆ ಮಾಧ್ಯಮಗಳು ಇಂದ್ರಾಣಿ ಅವರನ್ನು ಸುತ್ತುವರೆದಿತ್ತು. ಈ ವೇಳೆ ಮಾತನಾಡಿದ ಅವರು, ಬಹಳ ಸಮಯಗಳ ಬಳಿಕ ಹೀಗೆ ಆಕಾಶವನ್ನು ನೋಡಿದ್ದು, ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ಇಂದ್ರಾಣಿ ಮುಖರ್ಜಿ ತನ್ನ ಮಗಳು ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರು. 2012ರಲ್ಲಿ ಶೀನಾಳನ್ನು ಅಪಹರಿಸಿ ಕತ್ತು ಹಿಸುಕಿ ಕೊಲೆ ಮಾಡಲಾಗಿದ್ದು, ಆಕೆಯ ದೇಹವನ್ನು ಮುಂಬೈನ ಹೊರವಲಯದಲ್ಲಿರುವ ಹೊಂಡದಲ್ಲಿ ಇಡಲಾಗಿತ್ತು.
ಇಂದ್ರಾಣಿ ಮುಖರ್ಜಿಯ ಮಾಜಿ ಪತಿ ಪೀಟರ್ ಮುಖರ್ಜಿ ಅವರು ಇತರ ಇಬ್ಬರೊಂದಿಗೆ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಈ ಪ್ರಕರಣದಲ್ಲಿ ಪೀಟರ್ ಮುಖರ್ಜಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾರೆ.
https://twitter.com/IndiaToday/status/1527628403977109507?ref_src=twsrc%5Etfw%7Ctwcamp%5Etweetembed%7Ctwterm%5E1527628403977109507%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Findia%2Fstory%2Findrani-mukerjea-walks-out-of-byculla-jail-sheena-bora-murder-case-1952018-2022-05-20
https://twitter.com/IndiaToday/status/1527626368460398592?ref_src=twsrc%5Etfw%7Ctwcamp%5Etweetembed%7Ctwterm%5E1527626368460398592%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Findia%2Fstory%2Findrani-mukerjea-walks-out-of-byculla-jail-sheena-bora-murder-case-1952018-2022-05-20