alex Certify ‘ಶೀತ’ ವಾತಾವರಣದಲ್ಲಿ ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಶೀತ’ ವಾತಾವರಣದಲ್ಲಿ ಮಾಡಿ ಈ ಕೆಲಸ

ಮುದ್ರೆಗಳು  ಯೋಗದ ಒಂದು ಭಾಗ. ಮುದ್ರೆಯಲ್ಲಿ ಪೃಥ್ವಿ ಮುದ್ರೆ, ವಾಯು ಮುದ್ರೆ, ಸೂರ್ಯ ಮುದ್ರೆ ಹೀಗೆ ವಿವಿಧ ಮುದ್ರೆಗಳಿವೆ. ಈ ಮುದ್ರೆಯನ್ನು ಪ್ರತಿ ದಿನ ಮಾಡೋದ್ರಿಂದ ಅನೇಕ ಪ್ರಯೋಜನಗಳಿವೆ. ಸೂರ್ಯ ಮುದ್ರೆ ಮಾಡುವುದು ತುಂಬ ಸುಲಭ. ಪ್ರತಿ ದಿನ ಇದನ್ನು 5 ನಿಮಿಷಗಳ ಕಾಲ ಮಾತ್ರ ಮಾಡಬೇಕು.  ಸೂರ್ಯ ಮುದ್ರೆ ದೇಹದಲ್ಲಿನ ಅಗ್ನಿಯ ಅಂಶವನ್ನು ತುಂಬುತ್ತದೆ. ಇದು ನಿಮ್ಮ ದೇಹದಲ್ಲಿನ ಶಕ್ತಿ, ಉತ್ಸಾಹವನ್ನು ಹೆಚ್ಚಿಸುತ್ತದೆ.

ಸೂರ್ಯ ಮುದ್ರೆಯ ಪ್ರಯೋಜನಗಳು: ಈ ಮುದ್ರೆ  ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವುದಲ್ಲದೆ, ದೃಷ್ಟಿ ಸುಧಾರಿಸಲು ಸಹಾಯಕಾರಿ. ನೀವು ಶೀತ ವಾತಾವರಣದಲ್ಲಿ ಇದ್ರೆ ಈ ಭಂಗಿಯ ಮುದ್ರೆಯನ್ನು ಮಾಡಿ. ಇದ್ರಿಂದ  ನಿಮ್ಮ ದೇಹದಲ್ಲಿ ಶಾಖ ಹೆಚ್ಚಾಗಿ ಚೈತನ್ಯ ಹೆಚ್ಚಿಸುತ್ತದೆ. ದೇಹದಲ್ಲಿ ಜೀರ್ಣಕ್ರಿಯೆ ಸರಾಗವಾಗಿ ನಡೆಯುವಂತೆ ಮಾಡುತ್ತದೆ. ದೇಹದಲ್ಲಿನ ಕೊಬ್ಬಿನಂಶವನ್ನು ಸಹ ಕಡಿಮೆ ಮಾಡುತ್ತದೆ.

ನಮ್ಮ ದೇಹವು ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ ಹೀಗೆ 5 ಅಂಶಗಳಿಂದ ಕೂಡಿದೆ. ಇದಕ್ಕೆ ಸಮನಾಗಿ ಮುದ್ರೆಗಳಿವೆ. ದೇಹದಲ್ಲಿ ಅಸಮತೋಲನ ಉಂಟಾದಾಗ  ಕೈಯ ಮುದ್ರಾ  ಭಂಗಿಗಳಿಂದ ನಾವು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪ್ರತಿ ದಿನ 5 ನಿಮಿಷಗಳ ಸೂರ್ಯ ಮುದ್ರೆಯನ್ನು ಮಾಡಿ ನಿಮ್ಮ ಆರೋಗ್ಯ ಸುಧಾರಿಸಿಕೊಳ್ಳಿ.  ಆದರೆ ಈ ಮುದ್ರೆ ದೇಹದ ಶಾಖವನ್ನು ಹೆಚ್ಚಿಸುತ್ತದೆ. ಹಾಗಾಗಿ  ಈ ಮುದ್ರೆಯನ್ನು ಮಾಡುವ ಮೊದಲು ಒಂದು ಲೋಟ ನೀರು ಕುಡಿಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...