ಪತಿ-ಪತ್ನಿ ನಡುವೆ ಹೊಂದಾಣಿಕೆಯಿದ್ದಾಗ ಮಾತ್ರ ದಾಂಪತ್ಯದಲ್ಲಿ ಸುಖ-ಶಾಂತಿ ಸಾಧ್ಯ. ಕೆಲವೊಮ್ಮೆ ವಾಸ್ತುದೋಷದಿಂದ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಸಂತಾನ, ಸಂತೋಷದ ಮೇಲೂ ಇದು ಪರಿಣಾಮ ಬೀರುತ್ತದೆ. ವಾಸ್ತು ದೋಷದಿಂದಾಗಿ ಪತಿ-ಪತ್ನಿ ಮಕ್ಕಳ ಸಂತೋಷದಿಂದ ವಂಚಿತರಾಗುವ ಸಾಧ್ಯತೆಯಿರುತ್ತದೆ.
ಸಂತಾನ ಪ್ರಾಪ್ತಿ ವಿಳಂಬವಾದ್ರೆ ಪತಿ-ಪತ್ನಿ ಉತ್ತರ ದಿಕ್ಕಿನಲ್ಲಿ ಮಲಗಬೇಕಾಗುತ್ತದೆ. ಈ ದಿಕ್ಕಿನಲ್ಲಿ ಬೆಡ್ ರೂಂ ಇದ್ದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಶೀಘ್ರದಲ್ಲಿಯೇ ಸಂತಾನ ಪ್ರಾಪ್ತಿಯಾಗುತ್ತದೆ.
ಪತಿ-ಪತ್ನಿ ಇಬ್ಬರು ಒಂದೇ ಹಾಸಿಗೆ ಮೇಲೆ ಮಲಗಬೇಕು. ಒಂದೇ ಮಂಚದಲ್ಲಿ ಬೇರೆ ಬೇರೆ ಹಾಸಿಗೆ ಮೇಲೆ ಮಲಗುವುದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ.
ಮಲಗುವ ಕೋಣೆ ಗೋಡೆ ಬಣ್ಣ ಗುಲಾಬಿ ಅಥವಾ ಹಳದಿ ಬಣ್ಣದಿದ್ದರೆ ಇಬ್ಬರ ನಡುವೆ ಪ್ರೀತಿ ಹೆಚ್ಚಾಗುತ್ತದೆ.
ವೈವಾಹಿಕ ಜೀವನ ಸುಖವಾಗಿರಬೇಕಾದ್ರೆ ದಿನ ಅಥವಾ ವಾರಕ್ಕೊಮ್ಮೆ ಉಪ್ಪಿನ ನೀರನ್ನು ಮನೆಗೆ ಸಿಂಪಡಿಸಬೇಕು.
ಮಲಗುವ ಕೋಣೆಯಲ್ಲಿ ಡ್ರೆಸ್ಸಿಂಗ್ ಟೇಬಲ್ ಇಡಬೇಡಿ. ಇದು ನಿದ್ರೆ ಏರುಪೇರಾಗಲು ಕಾರಣವಾಗುತ್ತದೆ.
ಮಲಗುವ ಕೋಣೆಯಲ್ಲಿ ಕೃಷ್ಣ-ರಾಧೆಯ ಫೋಟೋವನ್ನು ಹಾಕಿ.