ವಾಸ್ತುದೋಷ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ವಾಸ್ತುದೋಷದಿಂದ ವಿವಾಹಕ್ಕೆ ಅಡ್ಡಿಯಾಗುತ್ತದೆ. ಮದುವೆಗೆ ಅಡೆತಡೆ ಬರುತ್ತದೆ. ಮದುವೆ ವಿಳಂಬವಾಗುತ್ತದೆ. ಕೆಲ ವಾಸ್ತುದೋಷಗಳನ್ನು ಸರಿಪಡಿಸುವ ಮೂಲಕ ಶೀಘ್ರ ಕಂಕಣಭಾಗ್ಯ ಪಡೆಯಬಹುದು.
ಅವಿವಾಹಿತರ ಕೋಣೆಯಲ್ಲಿ ಎಂದೂ ಹಸಿರು ಗಿಡ-ಸಸ್ಯ, ತಾಜಾ ಹೂವುಗಳನ್ನು ಇಡಬೇಡಿ. ವಾಸ್ತು ಪ್ರಕಾರ ಇದ್ರಲ್ಲಿರುವ ಅಂಶ ಮದುವೆಗೆ ಅಡ್ಡಿಯುಂಟು ಮಾಡುತ್ತದೆ.
ಅವಿವಾಹಿತ ಹುಡುಗಿ ಕೋಣೆಯ ಗೋಡೆ ಮೇಲೆ ಹೂವುಗಳ ಚಿತ್ರವನ್ನು ಹಾಕಬೇಕು. ಹೂವುಗಳು ಸೌಂದರ್ಯ, ಪ್ರೀತಿ ಮತ್ತು ಪ್ರಣಯದ ಸಂಕೇತವಾಗಿದೆ.
ಮನೆಯ ಪಶ್ಚಿಮ ಭಾಗವನ್ನು ಸ್ವಚ್ಛವಾಗಿಡಬೇಕು. ಧನಾತ್ಮಕ ಶಕ್ತಿಯ ಹರಿವನ್ನು ಇದು ಹೆಚ್ಚು ಮಾಡುತ್ತದೆ.
ಒಂದಕ್ಕಿಂತ ಎರಡು ಬಾಗಿಲಿರುವ ಕೋಣೆಯಲ್ಲಿ ಮಲಗುವುದು ಒಳ್ಳೆಯದು.
ಮದುವೆಯಾಗಲು ಬಯಸುವ ಅವಿವಾಹಿತರು ಕಪ್ಪು ಬಣ್ಣದ ಬಟ್ಟೆ ಧರಿಸಬಾರದು. ಈ ಬಣ್ಣವು ರಾಹು, ಕೇತು ಮತ್ತು ಶನಿಗಳನ್ನು ಪ್ರತಿನಿಧಿಸುತ್ತದೆ. ಇದರಿಂದಾಗಿ ಕೆಲಸದಲ್ಲಿ ಅಡೆತಡೆಗಳು ಎದುರಾಗುತ್ತವೆ.
ಮದುವೆಯಾಗುವ ಹುಡುಗರು ಮತ್ತು ಹುಡುಗಿಯರ ಕೋಣೆಯಲ್ಲಿ ಹಾಸಿಗೆಯ ಕೆಳಗೆ ದೊಡ್ಡ ಪಾತ್ರೆಗಳು ಅಥವಾ ಕಬ್ಬಿಣದ ಪಾತ್ರೆಗಳನ್ನು ಇಡಬಾರದು. ಅಲ್ಲದೆ ಶಿವನ ಪೂಜೆಯನ್ನು ಮಾಡಬೇಕು.