ಗಿನ್ನಿಸ್ ವಿಶ್ವ ದಾಖಲೆಗಳ ಪ್ರಕಾರ, ವೆನೆಜುವೆಲಾದ ಜುವಾನ್ ವಿಸೆಂಟೆ ಪೆರೆಜ್ ಅವರನ್ನು ಜೀವಂತ (ಪುರುಷ) ಅತ್ಯಂತ ಹಿರಿಯ ವ್ಯಕ್ತಿ ಎಂದು ಅಧಿಕೃತವಾಗಿ ಗುರುತಿಸಿದೆ. ಅವರಿಗೆ 112 ವರ್ಷಗಳು, 11 ತಿಂಗಳುಗಳು ಮತ್ತು 22 ದಿನಗಳಾಗಿದ್ದು, ಶೀಘ್ರದಲ್ಲೇ ಅವರು 113 ನೇ ಜನ್ಮದಿನವನ್ನು ಆಚರಿಸಲಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ವಿಡಿಯೋ ಹಂಚಿಕೊಂಡಿದೆ. ತಾವು ಇನ್ನೆಷ್ಟು ದಿನ ಬದುಕಬೇಕು ಎಂದು ಆಶಿಸುತ್ತೀರಾ ಎಂದು ಜುವಾನ್ ರಲ್ಲಿ ಕೇಳಿದಾಗ, ಅವರು ಕನಿಷ್ಠ 10 ವರ್ಷಗಳವರೆಗೆ ಬದುಕುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಜುವಾನ್, ತನ್ನ ಸಲಹೆಯನ್ನು ಇತರರೊಂದಿಗೆ ಹಂಚಿಕೊಂಡಿದ್ದಾರೆ. ಈ ವೇಳೆ ಅವರು ಜನರಲ್ಲಿ ಹೆಚ್ಚು ಮದ್ಯಪಾನ ಮಾಡದಂತೆ ವಿನಂತಿಸಿದ್ದಾರೆ.
ಈ ವರ್ಷದ ಜನವರಿ 18 ರಂದು 113 ವರ್ಷಗಳು ಮತ್ತು 341 ದಿನಗಳಲ್ಲಿ ಸ್ಪೇನ್ನ ಸಾಟರ್ನಿನೊ ಡೆ ಲಾ ಫ್ಯೂಯೆಂಟೆ ಗಾರ್ಸಿಯಾ, ಮರಣದ ನಂತರ ಜುವಾನ್ ಈ ವರ್ಷದ ಫೆಬ್ರವರಿ 22 ರಂದು ಜೀವಂತ ವ್ಯಕ್ತಿ (ಪುರುಷ) ಎಂಬ ಬಿರುದನ್ನು ಪಡೆದಿದ್ದಾರೆ.
ಮೇ 27, 1909 ರಂದು ವೆನೆಜುವೆಲಾದ ಟಾಚಿರಾದಲ್ಲಿ ತನ್ನ ಹೆತ್ತವರ 9ನೇ ಮಗುವಾಗಿ ಜುವಾನ್ ಜನಿಸಿದ್ರು. ಅವರು ತಮ್ಮ ಆರಂಭಿಕ ವರ್ಷಗಳನ್ನು ತಮ್ಮ ತಂದೆಯೊಂದಿಗೆ ತಮ್ಮ ಕೃಷಿ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ರು. ದೀರ್ಘಕಾಲದವರೆಗೆ ಔಪಚಾರಿಕ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದಿದ್ದರೂ, ಅವರು ಓದುವ ಮತ್ತು ಬರೆಯುವುದನ್ನು ಕಲಿತರು.
ಜುವಾನ್ 1937 ರಲ್ಲಿ ಎಡಿಯೋಫಿನಾ ಡೆಲ್ ರೊಸಾರಿಯೊ ಗಾರ್ಸಿಯಾ ಅವರನ್ನು ವಿವಾಹವಾಗಿದ್ದರು. ಮುಂದಿನ 60 ವರ್ಷಗಳ ಕಾಲ ಅಂದ್ರೆ, 1997 ರಲ್ಲಿ ಅವರು ಸಾಯುವವರೆಗೂ ಅವರೊಂದಿಗೆ ಇದ್ದರು. ದಂಪತಿಗೆ ಒಟ್ಟು 11 ಮಕ್ಕಳಿದ್ದು, ಆರು ಗಂಡು ಮತ್ತು ಐದು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ.