
ಪ್ರಮೋದ್ ಜಯ ನಿರ್ದೇಶನದ ರಂಜಿತ್ ಅಭಿನಯದ ದಿಲ್ ಖುಷ್ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಶೀಘ್ರದಲ್ಲೇ ಘೋಷಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಹೊಸ ಪೋಸ್ಟರ್ ವೊಂದನ್ನು instagram ಅಲ್ಲಿ ಹಂಚಿಕೊಂಡಿದ್ದಾರೆ.
ಸದ್ಯದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಗೃಹಪ್ರವೇಶ ಧಾರಾವಾಹಿಯ ನಟಿ ಸ್ಪಂದನ ಸೋಮಣ್ಣ ಈ ಸಿನಿಮಾದ ನಾಯಕಿಯಾಗಿದ್ದಾರೆ.
ರೋಮ್ಯಾಂಟಿಕ್ ಲವ್ ಸ್ಟೋರಿ ಹಾಗೂ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಧರ್ಮಣ್ಣ ಕಡೂರು, ರಂಗಾಯಣ ರಘು, ಅರುಣ ಬಾಲರಾಜ್, ರಘುರಾಮನಕೊಪ್ಪ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ. ಜಯಪ್ರಭಾ ಕಲರ್ ಫ್ರೇಮ್ಸ್ ಬ್ಯಾನರ್ ನಡಿ ಪ್ರಭಾಶೇಖರ್ ಮತ್ತು ಜಯಲಕ್ಷ್ಮಿ ಪ್ರವೀಣ್ ನಿರ್ಮಾಣ ಮಾಡಿದ್ದು, ಪ್ರಸಾದ್ ಕೆ ಶೆಟ್ಟಿ ಸಂಗೀತ ಸಂಯೋಜನೆ ನೀಡಿದ್ದಾರೆ.
