
ಹೌದು, ಥೈಲ್ಯಾಂಡ್ನ ಸಾಂಗ್ಖ್ಲಾದಲ್ಲಿರುವ ಚಡೀನ್ ಎಂಬ ಕೆಫೆಯಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಪಾನೀಯಗಳನ್ನು ನೀಡಲಾಗುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅಲ್ಲದೆ ಆ ಪ್ಲಾಸ್ಟಿಕ್ ಚೀಲದ ಒಂದು ತುದಿಯು ಶಿಶ್ನ ಆಕಾರದಲ್ಲಿದ್ದು, ಇದು ಜನರಲ್ಲಿ ಅಸಹ್ಯ ಮೂಡಲು ಕಾರಣವಾಗಿದೆ.
ಬ್ಯಾಗ್ಗಳ ಚಿತ್ರಗಳನ್ನು ಮೊದಲು ಫೇಸ್ಬುಕ್ನಲ್ಲಿ ಕೆಫೆ ಹಂಚಿಕೊಂಡಿತು. ಇದು ಜನರ ಕೆಂಗಣ್ಣು ಬೀರಲು ಕಾರಣವಾಯಿತು. ಇದೀಗ, ಕೆಫೆಯು ಸೂಕ್ಷ್ಮ ಕಾರಣಗಳಿಗಾಗಿ ಶಿಶ್ನ ಆಕಾರದ ಚೀಲಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಫೇಸ್ಬುಕ್ ಪೋಸ್ಟ್ನಲ್ಲಿ ಕೆಫೆಯು, ತಮ್ಮ ಬ್ಯಾಗ್ಗಳಿಗಾಗಿ ಸಾರ್ವಜನಿಕರಲ್ಲಿ ಕ್ಷಮೆ ಯಾಚಿಸಿದೆ. ಇನ್ನು ಮುಂದೆ ಶಿಶ್ನ ಆಕಾರದ ಪ್ಲಾಸ್ಟಿಕ್ ಚೀಲದಲ್ಲಿ ಪಾನೀಯಗಳನ್ನು ನೀಡುವುದಿಲ್ಲ ಎಂದು ಹೇಳಿದೆ.