ಶಿವನಿಗೆ ಪ್ರಿಯವಾದ ದಿನ ಸೋಮವಾರ. ಈ ದಿನ ಶಿವನ ಆರಾಧನೆ ಮಾಡಿದ್ರೆ ಭಗವಂತ ಬೇಡಿದ್ದೆಲ್ಲ ನೀಡುತ್ತಾನೆ ಎಂಬ ನಂಬಿಕೆಯಿದೆ.
ಸೋಮವಾರ ಶಿವನಿಗೆ ಮೀಸಲಾದ ದಿನವಾಗಿದ್ದರಿಂದ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅರ್ಚನೆ ನಡೆಯುತ್ತದೆ. ಸೋಮವಾರ ಶಿವನ ದೇವಸ್ಥಾನಕ್ಕೆ ಹೋಗುವ ಭಕ್ತರು ಅವಶ್ಯವಾಗಿ ಈ ಕೆಲಸಗಳನ್ನು ಮಾಡಬೇಕು.
ಸೋಮವಾರ ಶಿವನ ಭಕ್ತರು ಮನೆಯಲ್ಲಿ ಅಥವಾ ಶಿವನ ಮಂದಿರಕ್ಕೆ ತೆರಳಿ ಶಿವನಿಗೆ ಹಾಲು ಹಾಗೂ ಜೇನುತುಪ್ಪದ ಅಭಿಷೇಕ ಮಾಡಬೇಕು. ಹೀಗೆ ಮಾಡಿದಲ್ಲಿ ಶಿವ ಬೇಡಿದ ವರ ನೀಡುತ್ತಾನೆ ಎಂಬ ನಂಬಿಕೆಯಿದೆ.
ಶಿವ, ಬಿಲ್ವಪತ್ರೆ ಪ್ರಿಯ. ಸೋಮವಾರ ಭಕ್ತರು 11 ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಬೇಕು.
ಸೋಮವಾರ ಶಿವನ ದೇವಸ್ಥಾನಕ್ಕೆ ತೆರಳಿ ಶಿವಲಿಂಗಕ್ಕೆ ಗಂಗೆಯ ಅಭಿಷೇಕ ಮಾಡಬೇಕು. ಸತತ 5 ಸೋಮವಾರಗಳ ಕಾಲ ಗಂಗೆಯ ಅಭಿಷೇಕ ಮಾಡಿದ್ರೆ ಫಲಿತಾಂಶ ಕಾಣಬಹುದು.
‘ಓಂ ನಮಃ ಶಿವಾಯ’ ಮಂತ್ರಕ್ಕೆ ಅಪಾರ ಶಕ್ತಿಯಿದೆ. ಶಿವನ ಭಕ್ತರು ‘ಓಂ ನಮಃ ಶಿವಾಯ’ ಮಂತ್ರ ಜಪಿಸುವ ಜೊತೆಗೆ ಆಯಾ ಋತುವಿನಲ್ಲಿ ಸಿಗುವ ಯಾವುದೇ ಹಣ್ಣನ್ನು ಶಿವನಿಗೆ ಅರ್ಪಣೆ ಮಾಡಬೇಕು.