ಶಿವನ ಆರಾಧನೆಯಲ್ಲಿ ಬಿಲ್ವಪತ್ರೆ ವಿಶೇಷ ಪ್ರಾಮುಖ್ಯತೆ ಹೊಂದಿದೆ. ಪ್ರತಿ ದಿನ ಶಿವನಿಗೆ ಬಿಲ್ವಪತ್ರೆ ಅರ್ಪಿಸಲು ಸಾಧ್ಯವಾಗದವರು ಶ್ರಾವಣ ಅಥವಾ ಪ್ರದೋಷದ ದಿನದಂದು ಅರ್ಪಿಸಬಹುದು. ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುವುದ್ರಿಂದ ಸದ್ಗುಣ ಪ್ರಾಪ್ತಿಯಾಗುತ್ತದೆ. ಶಿವರಾತ್ರಿಯಂದು ಶಿವನಿಗೆ ಇಷ್ಟವಾದ ಬಿಲ್ವಪತ್ರೆ ಅರ್ಪಿಸಿ ಆತನ ಮನಸ್ಸು ಗೆಲ್ಲಬಹುದು.
ಬಿಲ್ವಪತ್ರೆ ಮರದ ಬೇರುಗಳಲ್ಲಿ ಶಿವ ವಾಸವಾಗುತ್ತಾನೆಂದು ನಂಬಲಾಗಿದೆ. ದೇವಸ್ಥಾನದ ಸುತ್ತಮುತ್ತ ಬಿಲ್ವಪತ್ರೆ ಮರಗಳಿರುತ್ತವೆ. ಬಿಲ್ವಪತ್ರೆ ಹುಟ್ಟಿದ ಬಗ್ಗೆ ಸಾಕಷ್ಟು ಕಥೆಗಳಿವೆ. ಶಿವನಿಗೆ ಪ್ರಿಯವಾದ ಈ ಬಿಲ್ವಪತ್ರೆಯನ್ನು ತೆಗೆಯುವಾಗ್ಲೂ ಕೆಲ ನಿಯಮಗಳನ್ನು ಪಾಲಿಸಬೇಕು. ಬಿಲ್ವಪತ್ರೆ ಚೆನ್ನಾಗಿದ್ದರೆ ಒಂದರಿಂದ ಎರಡು ಬಾರಿ ಶಿವನ ಪೂಜೆಗೆ ಅದನ್ನು ಬಳಸಬಹುದು. ಬಿಲ್ವಪತ್ರೆ ಒಣಗಿದ್ದರೆ ಅದನ್ನು ಶಿವನಿಗೆ ಅರ್ಪಿಸಬಾರದು.
ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಿಸುವ ಮೊದಲು ಓಂ ಶಿವ ಪಂಚಾಕ್ಷರಿ ಮಂತ್ರವನ್ನು ಅದ್ರ ಮೇಲೆ ಬರೆಯಬೇಕು. ಶ್ರೀಗಂಧ ಅಥವಾ ಅಷ್ಟಗಂಧದಲ್ಲಿ ಬರೆಯಬೇಕು. ಇದು ವ್ಯಕ್ತಿಯ ಅಪರೂಪದ ಆಸೆಯನ್ನು ಈಡೇರಿಸುತ್ತದೆ.